ಇಂದಿನ ಭಾರತದಲ್ಲಿ ನನ್ನ ಮಕ್ಕಳ ಬಗ್ಗೆ ಆತಂಕ ಕಾಡುತ್ತಿದೆ!: ನಾಸಿರುದ್ದೀನ್ ಶಾ
0
ಡಿಸೆಂಬರ್ 20, 2018
ನವದೆಹಲಿ: ಕಾನೂನನ್ನು ಕೈಗೆತ್ತಿಕೊಳ್ಳುತ್ತಿರುವವರ ವಿರುದ್ಧ ಬಾಲಿವುಡ್ ನಟ ನಾಸಿರುದ್ದೀನ್ ಶಾ ಅಸಮಾಧಾನ ವ್ಯಕ್ತಪಡಿಸಿದ್ದು, ಇಂದಿನ ಭಾರತದಲ್ಲಿ ನನ್ನ ಮಕ್ಕಳ ಬಗ್ಗೆ ಆತಂಕ ಕಾಡುತ್ತಿದೆ ಎಂದಿದ್ದಾರೆ.
ಕಾನೂನನ್ನು ಕೈಗೆತ್ತಿಕೊಳ್ಳುವುವವರು ನಿರ್ಭಯದಿಂದ ಇರುತ್ತಾರೆ. ಇಂದಿನ ಭಾರತದಲ್ಲಿ ಪೊಲೀಸ್ ಅಧಿಕಾರಿ ಸಾವಿಗಿಂತಲೂ ಹಸುವಿನ ಸಾವಿಗೆ ಹೆಚ್ಚಿನ ಮಹತ್ವವಿದೆ. ಇಂದಿನ ಭಾರತದಲ್ಲಿ ನನ್ನ ಮಕ್ಕಳ ಬಗ್ಗೆ ಆತಂಕ ಕಾಡುತ್ತಿದೆ. ಯಾರಾದರೂ ಅವರನ್ನು ಸುತ್ತುವರೆದು ನೀನು ಹಿಂದುನಾ ಅಥವಾ ಮುಸ್ಲಿಮನಾ ಎಂದು ಕೇಳಿದರೆ ಅವರ ಬಳಿ ಉತ್ತರ ಇರುವುದಿಲ್ಲ. ಏಕೆಂದರೆ ಅವರಿಗೆ ನಾವು ಧಾರ್ಮಿಕ ಶಿಕ್ಷಣ ನೀಡಿಲ್ಲ ಎಂದು ನಾಸಿರುದ್ದೀನ್ ಶಾ ಹೇಳಿದ್ದಾರೆ.
ದೇಶದಲ್ಲಿ ವಿಷದ ವಾತಾವರಣ ಹರಡಿದೆ, ಈ ರೀತಿಯ ವಾತಾವರಣವನ್ನು ನಿಯಂತ್ರಿಸುವುದು ಕಷ್ಟ ಸಾಧ್ಯ ಎಂದು ನಾಸಿರುದ್ದೀನ್ ಶಾ ಅಭಿಪ್ರಾಯಪಟ್ಟಿದ್ದಾರೆ. ನಾಸಿರುದ್ದೀನ್ ಶಾ ಅವರ ಈ ಅಭಿಪ್ರಾಯಗಳನ್ನು ಕರ್ವಾನ್-ಎ-ಮೊಹಬ್ಬತ್ ಇಂಡಿಯಾ ಕಾರವಾನ್ ಆಫ್ ಲವ್ ನ ಯೂಟ್ಯೂಬ್ ಖಾತೆಯಲ್ಲಿ ಪ್ರಕಟಿಸಲಾಗಿದೆ.


