HEALTH TIPS

ಅಂಗವಿಕಲ ಮಕ್ಕಳಿಗೆ ಸಾಂತ್ವನ ಸ್ಪರ್ಶ ವಲಿಯಪರಂಬ ಪಂಚಾಯತ್‍ನಲ್ಲಿ ಬಡ್ಸ್ ಶಾಲೆ ಆರಂಭ

ಕಾಸರಗೋಡು: ಅಂಗವಿಕಲ ಮಕ್ಕಳಿಗೆ ಸಾಂತ್ವನ ಸ್ಪರ್ಶ ನೀಡುವ ನಿಟ್ಟಿನಲ್ಲಿ ಜಿಲ್ಲೆಯ ವಲಿಯಪರಂಬ ಗ್ರಾಮ ಪಂಚಾಯತ್‍ನಲ್ಲಿ ಬಡ್ಸ್ ಶಾಲೆ ತನ್ನ ಚಟುವಟಿಕೆಯನ್ನು ಆರಂಭಿಸಿದೆ. ಇಲ್ಲಿನ ಇಡಯಿಲಕ್ಕಾಡ್‍ನಲ್ಲಿ ಗ್ರಾಮ ಪಂಚಾಯತ್ ಸ್ವಾಮ್ಯದ ಒಂದು ಎಕ್ರೆ ಸ್ಥಳದಲ್ಲಿ ಚಟುವಟಿಕೆ ನಡೆಸಲಿರುವ ಬಡ್ಸ್ ಶಾಲೆಯ ಉದ್ಘಾಟನೆ 2019 ಜನವರಿ ತಿಂಗಳಲ್ಲಿ ಜರಗಲಿದೆ. ಈ ಪಂಚಾಯತ್‍ನ ಮೊದಲ ಬಡ್ಸ್ ಸ್ಕೂಲ್ ಇದಾಗಿದೆ. ವಿಶ್ವ ಬ್ಯಾಂಕ್ ಯೋಜನೆಯಲ್ಲಿ ಅಳವಡಿಸಿ 98 ಲಕ್ಷ ರೂ. ವೆಚ್ಚದಲ್ಲಿ ಯೋಜನೆ ಜಾರಿಗೊಳಿಸಲಾಗಿದೆ. ಈ ವರೆಗೆ ಪಂಚಾಯತ್ ವ್ಯಾಪ್ತಿಯಲ್ಲಿ ಅಂಗವಿಕಲರಾದ ಮಕ್ಕಳಿಗೆ ಕಲಿಕೆಗೆ, ಪ್ರತಿಭಾ ಪ್ರದರ್ಶನಕ್ಕೆ ಅವಕಾಶಗಳಿರಲಿಲ್ಲ. ಬಡ್ಸ್ ಶಾಲೆ ಆರಂಭಗೊಳ್ಳುವುದರೊಂದಿಗೆ ನೂರಾರು ಮಕ್ಕಳಿಗೆ ಕಲಿಕೆಗೆ ಅವಕಾಶ ತೆರೆದುಕೊಳ್ಳಲಿದೆ. 600 ಚದರ ಅಡಿ ವಿಸ್ತೀರ್ಣದ ಕಟ್ಟಡದಲ್ಲಿ ಪ್ರಾಥಮಿಕ ಪೂರ್ವ, ಕಿರಿಯ, ಹಿರಿಯ ಪ್ರಾಥಮಿಕ, ವೊಕೇಶನಲ್ ಹೈಯರ್ ಸೆಕೆಂಡರಿ ತರಗತಿಗಳು, ಸ್ಪೀಚ್ ಥೆರಪಿ, ಫಿಸಿಯೋ ಥೆರಪಿ ಇತ್ಯಾದಿ ಸೌಲಭ್ಯಗಳೂ ಇವೆ. ಆಡಳಿತೆ ವಿಭಾಗ, ಹುಡುಗರಿಗೆ ಮತ್ತು ಹುಡುಗಿಯರಿಗೆ ಪ್ರತ್ಯೇಕ ಶೌಚಾಲಯಗಳು, ಅಂಗವಿಕಲರಿಗೆ ಶೌಚಾಲಯಗಳು ಇತ್ಯಾದಿ ಇಲ್ಲಿವೆ. ಅಂಗವಿಕಲ ಮಕ್ಕಳನ್ನು ಸಮಾಜದ ಪ್ರಧಾನ ವಾಹಿನಿಗೆ ಕರೆತರುವ ಈ ಬಡ್ಸ್ ಸ್ಕೂಲ್ ಬಹಳ ದೊಡ್ಡ ಕೊಡುಗೆ ನೀಡುವ ನಿರೀಕ್ಷೆಯಿದೆ. ಪಂಚಾಯತ್ ಅಧಿಕಾರಿಗಳು ಮತ್ತು ಸಾರ್ವಜನಿಕರು ಈ ನಿಟ್ಟಿನಲ್ಲಿ ಸಕಾರಾತ್ಮಕ ಚಿಂತನೆಯಲ್ಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries