ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರ್ಪಡೆಗೆ ಆಗ್ರಹ
0
ಡಿಸೆಂಬರ್ 14, 2018
ಕಾಸರಗೋಡು: ತುಳು ಭಾಷೆಯನ್ನು ಸಂವಿಧಾನದ 8 ನೇ ಪರಿಚ್ಛೇದದಲ್ಲಿ ಸೇರ್ಪಡೆಗೊಳಿಸಿ ಸಂರಕ್ಷಿಸಬೇಕೆಂದು ಕಾಸರಗೋಡು ಸಂಸದ ಪಿ.ಕರುಣಾಕರನ್ ಲೋಕಸಭೆಯಲ್ಲಿ ಆಗ್ರಹಿಸಿದರು.
ಕಾಸರಗೋಡು ಜಿಲ್ಲೆ ಮತ್ತು ಕರ್ನಾಟಕದ ದಕ್ಷಿಣ ಭಾಗದ ಆಡು ಭಾಷೆಯಾಗಿದೆ ತುಳು. ಈ ಹಿಂದೆ ಭಾರೀ ಪ್ರಬಲ ಭಾಷೆಯಾಗಿದ್ದ ತುಳು ಹಲವು ಕಾರಣಗಳಿಂದಾಗಿ ಈಗ ಕ್ಷೀಣಿಸತೊಡಗಿದೆ. ದೇಶದಲ್ಲಿ ಲಕ್ಷಾಂತರ ಮಂದಿಯ ಮಾತೃ ಭಾಷೆ ತುಳು ಆಗಿದೆ ಎಂದು ಜನಗಣತಿ ಲೆಕ್ಕಾಚಾರಗಳು ಸೂಚಿಸುತ್ತವೆ.
ವಿಶ್ವದಾದ್ಯಂತವಾಗಿ 30 ಲಕ್ಷದಿಂದ 50 ಲಕ್ಷದಷ್ಟು ಮಂದಿ ತುಳು ಭಾಷಿಗರಿದ್ದಾರೆಂದು 2019 ರ ಅಧಿಕೃತ ಲೆಕ್ಕಾಚಾರಗಳು ಸೂಚಿಸುತ್ತವೆ. ಇಂತಹ ಪರಿಸ್ಥಿತಿಯಲ್ಲಿ ತುಳು ಭಾಷೆಯನ್ನು ಸಂವಿಧಾನದ 8 ನೇ ಪರಿಚ್ಛೇದದಲ್ಲಿ ಸೇರಿಸಿ ಸಂರಕ್ಷಿಸಬೇಕೆಂದು ಆಗ್ರಹಿಸಿದ್ದಾರೆ.


