ವಾಟೆತ್ತಿಲದಲ್ಲಿ ಷಷ್ಠಿ ಮಹೋತ್ಸವ
0
ಡಿಸೆಂಬರ್ 14, 2018
ಉಪ್ಪಳ: ವಾಟೆತ್ತಿಲ ಜಾಲು ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವವು ಶ್ರದ್ಧಾ ಭಕ್ತಿಯಿಂದ ನೆರವೇರಿತು. ಗುರುವಾರ ಮುಂಜಾನೆ ಗಣಪತಿ ಹವನ, ಪ್ರಾತಕಾಲ ಪೂಜೆ, ದೇವರಿಗೆ ವಿಶೇಷವಾದ ನವಕಾಭಿಷೇಕವು ನಡೆಯಿತು. ಮಧ್ಯಾಹ್ನ ಪ್ರಸಾದ ವಿತರಣೆ ಅನ್ನ ಸಂತರ್ಪಣೆ ಕಾರ್ಯಕ್ರಮಗಳು ಧಾರ್ಮಿಕ ವಿಧಿವಿಧಾನಗಳ ಮೂಲಕ ನೆರವೇರಿದವು. ಷಷ್ಠಿ ಮಹೋತ್ಸವದಲ್ಲಿ ಪಾಲ್ಗೊಂಡ ಭಕ್ತರಿಗೆ ಮದ್ಯಾಹ್ನ ಭೋಜನ ಪ್ರಸಾದ ವ್ಯವಸ್ಥೆ ಮಾಡಲಾಯಿತು. ಸಾಯಂಕಾಲ ದೀಪಾರಾಧನೆ, ಸಂಜೆ ಪೂಜೆಯೊಂದಿಗೆ ಷಷ್ಠಿ ಮಹೋತ್ಸವ ಸಮಾಪ್ತಿಯಾಯಿತು. ಬೆಳಗ್ಗೆ 10 ರಿಂದ 12.30 ರ ತನಕ ಶ್ರೀ ದುರ್ಗಾದೇವಿ ಭಜನಾ ಮಂಡಳಿ, ಎರ್ನಾಕುಳಂ ಕೊಚ್ಚಿ ಇದರ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ಷಷ್ಠಿ ಮಹೋತ್ಸವದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ವಿ.ಮಾಧವ ಭಟ್ ಜೀಣೋದ್ಧಾರ ಸಮಿತಿ ಅಧ್ಯಕ್ಷರು ಪದಾಧಿಕಾರಿಗಳು ಸಹಿತ ಊರ ಪರವೂರ ಭಕ್ತರು ಪಾಲ್ಗೊಂಡಿದ್ದರು.


