ಜಿಎಸ್‌ಟಿ ಸಭೆ: ೩೪ ವಸ್ತುಗಳನ್ನು ಬಿಟ್ಟು, ಮಿಕ್ಕೆಲ್ಲವೂ ೧೮% ತೆರಿಗೆ ವ್ಯಾಪ್ತಿಗೆ; ಎಲೆಕ್ಟಾçನಿಕ್ಸ್, ಸಿನಿಮಾ ಟಿಕೆಟ್ ಬೆಲೆ ಇಳಿಕೆ
0
ಡಿಸೆಂಬರ್ 22, 2018
ನವದೆಹಲಿ: ವಿತ್ತ ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ಇಂದು ನಡೆದ ಸರಕು ಸೇವಾ ತೆರಿಗೆ- ಜಿಎಸ್ ಟಿ ಸಭೆಯಲ್ಲಿ ೩೪ ವಸ್ತುಗಳನ್ನು ಬಿಟ್ಟು ಮಿಕ್ಕೆಲ್ಲವನ್ನೂ ಶೇ. ೧೮ ತೆರಿಗೆ ವ್ಯಾಪ್ತಿಗೆ ತರಲಾಗಿದೆ. ಇದರಿಂದಾಗಿ ಎಲೆಕ್ಟಾçನಿಕ್ಸ್ , ಸಿನಿಮಾ ಟಿಕೆಟ್ ಬೆಲೆ ಇಳಿಕೆಯಾಗಲಿದೆ.
ಸಭೆಯಲ್ಲಿ ಕೈಗೊಂಡಿರುವ ನಿರ್ಧಾರಗಳನ್ನು ಸುದ್ದಿಗಾರರಿಗೆ ತಿಳಿಸಿದ ಅರುಣ್ ಜೇಟ್ಲಿ, ಈಗ ೩೪ ಐಷರಾಮಿ ವಸ್ತುಗಳಿಗೆ ಮಾತ್ರ ಶೇ. ೨೮ ತೆರಿಗೆ ವಿಧಿಸಲಾಗುವುದು, ಎಕಾನಾಮಿ ದರ್ಜಿಯ ವಿಮಾನ ಟಿಕೆಟ್ ಬೆಲೆ ಮೇಲಿನ ಜೆಎಸ್ ಟಿಯನ್ನು ಶೇ. ೫ ಹಾಗೂ ಬ್ಯೂಸಿನೆಸ್ ದರ್ಜೆಯ ಟಿಕೆಟ್ ಮೇಲಿನ ಜಿಎಸ್ ಟಿ ತೆರಿಗೆಯನ್ನು ಶೇ, ೧೨ ರಷ್ಟು ಕಡಿಮೆ ಮಾಡಲಾಗಿದೆ ಎಂದು ಹೇಳಿದರು.
೧೦೦ರೂ. ವರೆಗಿನ ಸಿನಿಮಾ ಟಿಕೆಟ್ ಮೇಲಿನ ಜಿಎಸ್ ಟಿ ತೆರಿಗೆಯನ್ನು ಶೇ. ೧೮ ರಿಂದ ಶೇ.೧೨ಕ್ಕೆ ಇಳಿಕೆ ಮಾಡಲಾಗಿದೆ. ಆರಂಭದಲ್ಲಿ ೧೦೦ ರೂ. ವರೆಗಿನ ಸಿನಿಮಾ ಟಿಕೆಟ್ ಮೇಲೆ ಶೇ,. ೨೮ ರಷ್ಟು, ತದನಂತರ ಶೇ. ೧೮ ರಷ್ಟು ತೆರಿಗೆ ವಿಧಿಸಲಾಗುತಿತ್ತು ಎಂದರು.
ಮಾನಿಟರ್ , ಟಿವಿ, ಪವರ್ ಬ್ಯಾಂಕ್ ಮತ್ತಿತರ ವಸ್ತುಗಳ ಮೇಲಿನ ಜಿಎಸ್ ಟಿ ತೆರಿಗೆಯನ್ನು ಶೇ. ೨೮ ರಿಂದ ಶೇ.೧೮ಕ್ಕೆ ಇಳಿಕೆ ಮಾಡಲಾಗಿದೆ. ದಿವ್ಯಾಂಗರು ಬಳಸುವ ವಸ್ತುಗಳ ಮೇಲೆ ಶೇ, ೫ರಷ್ಟು ಇಳಿಸಲಾಗಿದ್ದು, ಜನ್ ಧನ್ ಬ್ಯಾಂಕ್ ಖಾತೆಗಳಿಗೆ ಸೇವೆ ಒದಗಿಸುವ ಬ್ಯಾಂಕುಗಳಿಗೆ ಜಿಎಸ್ ಟಿಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದರು.
ಮುಂದಿನ ಜನವರಿ ೧ ರಿಂದ ( ೨೦೧೯ರಿಂz)À ಪರಿಷ್ಕöÈತ ಜಿಎಸ್ ಟಿ ದರಗಳು ಜಾರಿಗೆ ಬರಲಿದ್ದು, ಇಂದು ಮಾಡಿರುವ ಜಿಎಸ್ ಟಿ ದರ ಪರಿಷ್ಕರಣೆಯಿಂದಾಗಿ ಸುಮಾರು ೫೫೦೦ ಕೋಟಿ ರೂ. ಆದಾಯದ ಮೇಲೆ ಪರಿಣಾಮ ಬೀರಲಿದೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.


