ಬದಿಯಡ್ಕ: ಸಾಹಿತ್ಯವೆಂಬ ಲೋಕದಲ್ಲಿ ಮುಖ ಪರಿಚಯವಿಲ್ಲದ ಅನೇಕ ಮನಸ್ಸುಗಳನ್ನು ಒಂದುಗೂಡಿಸುವಲ್ಲಿ `ವಿಶ್ವದರ್ಶನ'ವೆಂಬ ಈ ಸಮ್ಮೇಳನ ಕಾರಣವಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಸತ್ ಚಿಂತನೆಗಳನ್ನು ಒಳಗೊಂಡ ವಾಟ್ಸಪ್ ಬಳಗವು ಸಾಹಿತ್ಯಲೋಕಕ್ಕೆ ಯುವಮನಸ್ಸುಗಳನ್ನು ತೆರೆದಿಡುವಲ್ಲಿ ಪ್ರಧಾನಪಾತ್ರ ನಿರ್ವಹಿಸುತ್ತಿದೆ ಎಂದು ಹಿರಿಯ ಸಿನಿಮಾ ಪತ್ರಕರ್ತ, ಕರ್ನಾಟಕ ಮಾಧ್ಯಮ ಅಕಾಡೆಮಿ ಪುಸ್ತಕ ಪ್ರಶಸ್ತಿ ಪುರಸ್ಕøತ ಗಣೇಶ್ ಕಾಸರಗೋಡು ಅಭಿಪ್ರಾಯಪಟ್ಟರು.
ವಿಶ್ವಕರ್ಮ ಸಾಹಿತ್ಯದರ್ಶನ ಕಾಸರಗೋಡು ವಾಟ್ಸಪ್ ಬಳಗದ ನೇತೃತ್ವದಲ್ಲಿ ಶನಿವಾರ ಬದಿಯಡ್ಕ ಗ್ರಾಂಡ್ ಪ್ಲಾಝಾ ಆಡಿಟೋರಿಯಂನಲ್ಲಿ ವಿಶ್ವದರ್ಶನ 2019 ದ್ವಿದಿನ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ನಿವೃತ್ತ ಯೋಧ, ಚಿತ್ರನಟ, ಕವಿ ತಾರಾನಾಥ ಬೋಳಾರ್ ದೀಪ ಬೆಳಗಿಸಿ ಎರಡು ದಿನಗಳ ಸಾಹಿತ್ಯೋತ್ಸವಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಸಾಹಿತ್ಯಲೋಕಕ್ಕೆ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ.
ಸಾಹಿತ್ಯ ಪೋಷಕ, ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ ಮುಂದಾಳು ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು `ಅಣುರೇಣು' ಚುಟುಕು/ಹನಿಗವನ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ ಎಲ್ಲ ಕ್ಷೇತ್ರಗಳಲ್ಲಿ ವಿಶ್ವಕರ್ಮರು ತೊಡಗಿಸಿಕೊಳ್ಳುತ್ತಾ ಎಂದಿಗೂ ಆರದ ನಂದಾದೀಪವನ್ನು ವಿಶ್ವ ಸಾಹಿತ್ಯಕ್ಕೆ ನೀಡಿದ್ದಾರೆ. ವ್ಯಕ್ತಿಗೆ ವ್ಯಕ್ತಿತ್ವ ಬರಬೇಕಾದರೆ ಜ್ಞಾನವಿರಬೇಕು. ಪುಸ್ತಕಗಳಿಂದ ಚರಿತ್ರೆಯನ್ನು ತಿಳಿದುಕೊಳ್ಳುವ ಮೂಲಕ ಜ್ಞಾನ ಸಂಪಾದನೆ ಮಾಡಬಹುದಾಗಿದೆ. ಸಾಮಾಜಿಕ, ಕೌಟುಂಬಿಕ ನೋವುಗಳನ್ನು ನುಂಗಿಕೊಂಡು ಸಾಹಿತಿಗಳು ಜಗತ್ತಿಗೆ ಜ್ಞಾನವನ್ನು ನೀಡುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಸಾಹಿತ್ಯದ ಮೂಲಕ ಸಂಸ್ಕøತಿಯನ್ನು ಎತ್ತಿ ತೋರಿಸುವ ಮೂಲಕ ವಿಶ್ವದರ್ಶನವು ವಿಶ್ವವ್ಯಾಪಿಯಾಗಲಿ ಎಂದರು.
ವಿಶ್ವದರ್ಶನ ವಿಶೇಷ ಪುರವಣಿ ಬಿಡುಗಡೆಗೊಳಿಸಿ ಮಾತಾನಾಡಿದ ಹಿರಿಯ ಪತ್ರಕರ್ತ, ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಮಾತನಾಡುತ್ತಾ ಜೀವ ಜೀವದ ಬೆಸುಗೆಯಿಂದ ಸಾಕಾರಗೊಂಡ ಬಳಗದ ಮೂಲಕ ಸಾಹಿತ್ಯ ಹಾಗೂ ಸಂಸ್ಕøತಿಯ ಬೇರನ್ನು ಗಟ್ಟಿಗೊಳಿಸುವ ಪ್ರಯತ್ನವನ್ನು ಇಲ್ಲಿ ಕಾಣಬಹುದಾಗಿದೆ. ಯುವಬಳಗ ಸಾಮಾಜಿಕ ಜಾಲತಾಣವನ್ನು ಬಳಸಿ ಉತ್ತಮವಾದ ಕಾರ್ಯಗಳತ್ತ ಮುಖ ಮಾಡಿರುವುದು ಶ್ಲಾಘನೀಯವಾಗಿದೆ. ಧಾರ್ಮಿಕ ವಲಯದಲ್ಲಿ ವಿಶ್ವಕರ್ಮ ಸಮುದಾಯದವರ ಕೈಚಕವು ಅಪಾರ. ನಮ್ಮ ಸಂಸ್ಕøತಿ, ಆಚಾರ, ನಂಬಿಕೆ, ನಡವಳಿಕೆ, ಸಂಬಂಧಗಳನ್ನು ಉತ್ತಮಪಡಿಸಿಕೊಳ್ಳಲು ನಾವು ಸದಾ ಪ್ರಯತ್ನಿಸಬೇಕು ಎಂದರು.
ಪುಸ್ತಕ ಸಂಸ್ಕøತಿಯ ಪರಿವ್ರಾಜಕ ಕು.ಗೋ. ಉಡುಪಿ ಅವರು ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಾ ಶರೀರಕ್ಕೆ ಪ್ರಾಯವಾದರೂ ಪುಸ್ತಕಗಳನ್ನು ಓದುವುದರಿಂದ ಮನಸ್ಸು ಸದಾ ಹುಮ್ಮಸ್ಸಿನಿಂದಿರುತ್ತದೆ. ಪುಣ್ಯಪ್ರದವಾದ ಕೆಲಸಗಳು ನಡೆಯುತ್ತಿರುವಲ್ಲಿಗೆ ಆಮಂತ್ರಣದ ಅಗತ್ಯವಿಲ್ಲ. ಎಳೆಯರ ಪ್ರತಿಭೆಯನ್ನು ಪೋಷಿಸುವುದು ಹಿರಿಯರ ಕರ್ತವ್ಯವಾಗಿದೆ. ಸಾಹಿತ್ಯ ಸಮ್ಮೇಳನಗಳ ಸದಾ ನಡೆಯುತ್ತಿರಬೇಕು. ಪುಸ್ತಕವನ್ನು ಪ್ರೀತಿಸಿ ಮನೆಯಲ್ಲೊಂದು ಗ್ರಂಥಭಂಡಾರವನ್ನು ತೆರೆಯಬೇಕು ಎಂದು ಅವರು ಹಿತವಚನಗಳನ್ನು ನೀಡಿದರು.
ಮೀಯಪದವು ವಿದ್ಯಾವರ್ಧಕ ಪ್ರೌಢ ಶಾಲೆಯ ಪ್ರಬಂಧಕ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಶಿಕ್ಷಣ ದರ್ಶನ 2019ರ ಯೋಜನೆಗೆ ಚಾಲನೆಯನ್ನು ನೀಡಿದರು. ಮುಖ್ಯ ಅತಿಥಿಗಳಾಗಿ ಯಕ್ಷಗಾನ ಕಲಾರಾಧಕ ವಿಶ್ವವಿನೋದ ಬನಾರಿ, ನಿವೃತ್ತ ಪ್ರಾಂಶುಪಾಲ ಡಾ.ಬೇ.ಸೀ.ಗೋಪಾಲಕೃಷ್ಣ ಭಟ್, ಅಂತಾರಾಷ್ಟ್ರೀಯ ಕವಯಿತ್ರಿ ಶಾಂತ ಕುಂಟಿನಿ, ಯಕ್ಷಗಾನ ಕಲಾವಿದ ಕರಿಂಬಿಲ ಲಕ್ಷ್ಮಣಪ್ರಭು, ಕನ್ನಡ ಸಾಹಿತ್ಯಪರಿಷತ್ತು ಕೇರಳ ಗಡಿನಾಡ ಘಟಕದ ಗೌರವ ಕಾರ್ಯದರ್ಶಿ ಪಿ. ರಾಮಚಂದ್ರ ಭಟ್, ಸಂಗೀತ ಶಿಕ್ಷಕಿ ವಿದುಷಿ ಉಷಾ ಈಶ್ವರ ಭಟ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ಸಾಹಿತಿ ಗುಣಾಜೆ ರಾಮಚಂದ್ರ ಭಟ್, ಕವಯಿತ್ರಿ ಲೇಖಕಿ ಮಲ್ಲಿಕಾ ಜೆ. ರೈ ಪುತ್ತೂರು, ವಾಸುದೇವ ಭಟ್, ತುಳು ಕವಯಿತ್ರಿ ಲೇಖಕಿ ಕುಶಾಲಾಕ್ಷಿ ವಿ. ಕುಲಾಲ್ ಕಣ್ವತೀರ್ಥ, ಕವಿ ಸಂಘಟಕ ಸುಂದರ ಬಾರಡ್ಕ, ಕವಯಿತ್ರಿ ಪರಿಣಿತ ರವಿ ಎರ್ನಾಕುಳಂ, ಪ್ರಗತಿಪರ ಕೃಷಿಕ ದಯಾನಂದ ರೈ ಕಳ್ವಾಜೆ ಗೌರವ ಉಪಸ್ಥಿತರಿದ್ದರು. ಬಲೆ ತೆಲಿಪಾಲೆ ಖ್ಯಾತಿಯ ರಾಜೇಶ್ ಮುಗುಳಿ, ಗಾಯಕ ರಂಗನಟ ಶಶಿಕುಮಾರ್ ಕುಳೂರು, ಪತ್ರಕರ್ತ ಸಿ.ಶೇ. ಕಜೆಮಾರು, ಪುರುಷೋತ್ತಮ ಭಟ್ ಪುದುಕೋಳಿ, ವಿನುತಾ ಪೆರ್ಲ, ಛಾಯಾಗ್ರಾಹಕ-ಪತ್ರಕರ್ತ ಶ್ಯಾಮಪ್ರಸಾದ ಸರಳಿ, ಬಹುಮುಖ ಬಾಲಪ್ರತಿಭೆ ಕು. ಶರಣ್ಯ ಬಂಗೇರ ತಲಪಾಡಿ ಪಾಲ್ಗೊಂಡಿದ್ದರು. ವಿಶ್ವದರ್ಶನ ಸಾಹಿತ್ಯ ಬಳಗದ ಸ್ಥಾಪಕ ಜಯ ಮಣಿಯಂಪಾರೆ ಆಶಯ ನುಡಿಗಳನ್ನಾಡಿದರು. ಪಾವನ್ ದಾಸ್ ಕೋಟೆಕ್ಕಾರು ಸ್ವಾಗತಿಸಿ, ಸಂತೋಷ್ ಸಾಗರ ಧನ್ಯವಾದವನ್ನಿತ್ತರು. ಕಾಂಚನ ಕೋಟೆಕ್ಕಾರು ನಿರೂಪಣೆಗೈದರು.



