21ರಿಂದ ಮೂರು ದಿನಗಳ ಕಾಲ ಗಾಳಿಯಡ್ಕ ಬ್ರಹ್ಮಶ್ರೀ ಮೊಗೇರ ಹಾಗೂ ಪರಿವಾರ ದೈವಗಳ ನೇಮೋತ್ಸವ
0
ಫೆಬ್ರವರಿ 18, 2019
ಉಪ್ಪಳ: ಬಾಯಾರು ಗ್ರಾಮದ ಗಾಳಿಯಡ್ಕ ಬ್ರಹ್ಮಶ್ರೀ ಮೊಗೇರ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವವು ಫೆ.21 ರಿಂದ ಮೂರು ದಿನಗಳ ಕಾಲ ನಡೆಯಲಿದೆ. ವಿವಿಧ ಧಾರ್ಮಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯುವ ನೇಮೋತ್ಸವದಲ್ಲಿ ಶ್ರೀ ದೈವಗಳ ಸಿರಿ ಮುಡಿ ಗಂಧ ಪ್ರಸಾದವನ್ನು ವಿತರಿಸಲಾಗುತ್ತದೆ.
ಫೆ.21 ರಂದು ಬೆಳಗ್ಗೆ ಸ್ಥಳ ಶುದ್ಧಿ, ಸಾಮೂಹಿಕ ಪ್ರಾರ್ಥನೆ, 9 ಗಂಟೆಗೆ ಗಣಪತಿ ಹವನ, 10 ಗಂಟೆಗೆ ಆವಳ ಕಲ್ಲಡ್ಕ ಗಣಪತಿ ತಂತ್ರಿಗಳ ನೇತೃತ್ವದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದ್ದು, ಮಧ್ಯಾಹ್ನ ಮಹಾ ಮಂಗಳಾರತಿ ನಂತರ ಪ್ರಸಾದ ವಿತರಣೆ ಜರುಗಲಿದೆ. ಮಧ್ಯಾಹ್ನ 1 ಕ್ಕೆ ಭೋಜನ ಪ್ರಸಾದ ಸಂಜೆ 4 ಗಂಟೆಗೆ ಜಾಗೆದ ಗುಳಿಗ ದೈವದ ಭಂಡಾರ ಇಳಿಯಲಿದ್ದು ದೈವ ಕೋಲ ಜರುಗಲಿದೆ. ರಾತ್ರಿ 7 ಗಂಟೆಗೆ ಸಭಾ ಕಾರ್ಯಕ್ರಮ ಏರ್ಪಡಲಿದ್ದು ಮಂಗಳೂರು ವಿ.ವಿ ಉಪನ್ಯಾಸಕ ಡಾ.ಅಭಯ ಚಂದ್ರ ಕೌಕ್ರಾಡಿ ಉದ್ಘಾಟಿಸಲಿದ್ದಾರೆ. ಬ್ರಹ್ಮಶ್ರೀ ಮೊಗೇರ ಹಾಗೂ ಪರಿವಾರ ದೈವಗಳ ಸೇವಾ ಸಮಿತಿ ಗಾಳಿಯಡ್ಕ ಇದರ ಅಧ್ಯಕ್ಷ ಮಾಧವ ಎ ಆಟಿಕುಕ್ಕೆ ಸಭೆಯ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಸರಕಾರದ ಭೂ ಕಂದಾಯ ಇಲಾಖೆ ಅಧಿಕಾರಿ ವಿಜಯ ವಿಕ್ರಮ್, ಸದಾಶಿವ ಕಣ್ವತೀರ್ಥ, ಗಣಪತಿ ಭಟ್, ಧೂಮ ಪೂಜಾರಿ ಅತಿಥಿಗಳಾಗಿ ಭಾಗವಹಿಸುವರು. ರಾಷ್ಟ್ರೀಯ ಮಟ್ಟದ ಕ್ರೀಡಾರಂಗದಲ್ಲಿ ವಿಶೇಷ ಸಾಧನೆಗೈದ ವಿನೀತ್ ರಾಜ್ ವೈ ಇವರಿಗೆ ಅಭಿನಂದನೆ ನಡೆಯಲಿದೆ. ಹಿರಿಯ ದೈವ ಪಾತ್ರಿ ಅಮ್ಮು ಚೇರಾಲ್, ನಿವೃತ್ತ ಕ್ಯಾಂಪ್ಕೋ ಸಿಬ್ಬಂದಿ ಮಾಧವ.ಎ ಆಟಿಕುಕ್ಕೆ ಇವರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ.
ರಾತ್ರಿ ಕೊರತಿ ದೈವದ ಭಂಡಾರ ಇಳಿಯಲಿದ್ದು, ಕೊರತಿ ದೈವದ ಕೋಲ, ಕೊರತಿ ದೈವದ ಪ್ರಸಾದ ಸ್ವೀಕಾರ ರಾತ್ರಿ 10 ಗಂಟೆಗೆ ಅಗ್ನಿ ಗುಳಿಗ ದೈವದ ಭಂಡಾರ ಇಳಿದು ಕೊಳ್ಳಿಗೆ ಅಗನಿ ಸ್ಪರ್ಶ ರಾತ್ರಿ 12.30 ಯಿಂದ ಸ್ಥಳೀಯ ಕಲಾವಿದರಿಂದ ಸಾಂಸ್ಖರತಿಕ ಕಾರ್ಯಕ್ರಮಗಳು ನಡೆಯಲಿದ್ದು. ಮುಂಜಾನೆ 3 ಕ್ಕೆ ಕೆಂಡ ಸೇವೆಯೊಂದಿಗೆ ಅಗ್ನಿಗುಳಿಗ ದೈವದ ಕೋಲ, ಬೆಳಗ್ಗೆ 6ಕ್ಕೆ ಪ್ರಸಾದ ವಿತರಣೆ ನಡೆಯಲಿದೆ.
ಫೆ.22 ರಂದು ರಾತ್ರಿ 9ಕ್ಕೆ ಬ್ರಹ್ಮಶ್ರೀ ಮುವೇರ್ ಮಾಗೇರ್ಲು ಮತ್ತು ತನ್ನಿ ಮಾನಿಗ ದೈವಗಳ ಭಂಡಾರ ಇಳಿಯುವುದು. 10 ರಿಂದ ಬ್ರಹ್ಮಶ್ರೀ ಮೊಗೇರ ದೈವಗಳ ನೇಮೋತ್ಸವ. ರಾತ್ರಿ 1 ಕ್ಕೆ ತನ್ನಿ ಮಾನಿಗ ದೈವ ಉತ್ಸವ ಸನ್ನಿಧಿಗೆ ಸೇರುವುದು, ನಂತರ ದೈವಗಳ ಪ್ರಸಾದ ಸ್ವೀಕಾರ ನಂತರ ದೈವಗಳ ಭಂಡಾರ ಏರಲಿದೆ.
ಫೆ.23 ರಂದು ಮಧ್ಯಾಹ್ನ 2.30 ಕ್ಕೆ ಕೊರಗ ತನಿಯ ದೈವದ ಭಂಡಾರ ಇಳಿಯುವುದು, 3.30 ಕ್ಕೆ ಕೊರಗ ತನಿಯ ದೈವದ ಕೋಲ, 6 ಕ್ಕೆ ದೈವದ ಪ್ರಸಾದ ಸ್ವೀಕಾರ,6. 30 ಕ್ಕೆ ದೈವ ಭಂಡಾರ ಏರುವ ಮೂಲಕ ಮೂರು ದಿನಗಳ ನೇಮೋತ್ಸವ ಸಮಾಪ್ತಿಯಾಗಲಿದೆ.

