ಜಮ್ಮು-ಕಾಶ್ಮೀರ: ಜೈಶ್ ಉಗ್ರ ಸಂಘಟನೆಯ 3 ಉಗ್ರರನ್ನು ಹೊಡೆದುರುಳಿಸಿದ ಸೇನೆ, ಓರ್ವ ಪೊಲೀಸ್, ಯೋಧ ಹುತಾತ್ಮ!
0
ಫೆಬ್ರವರಿ 24, 2019
ಶ್ರೀನಗರ: ಪುಲ್ವಾಮದಲ್ಲಿ ಆರ್ ಡಿಎಕ್ಸ್ ಸ್ಫೋಟಿಸಿ ಸಿಆರ್ ಪಿಎಫ್ ನ 40 ಯೋಧರ ಸಾವಿಗೆ ಕಾರಣವಾಗಿದ್ದ ಜೈಶ್-ಉಗ್ರ ಸಂಘಟನೆಯ 3 ಉಗ್ರರನ್ನು ಎನ್ ಕೌಂಟರ್ ಮೂಲಕ ಹೊಡೆದುರುಳಿಸಲಾಗಿದೆ.
ಕುಲ್ಗಾಮ್ ಜಿಲ್ಲೆಯ ತುರಿಗಾಮ್ ನಲ್ಲಿ ಭದ್ರತಾಪಡೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ. ಎನ್ ಕೌಂಟರ್ ನಲ್ಲಿ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದ್ದರೆ, ಕಾರ್ಯಾಚರಣೆಯಲ್ಲಿ ಡಿವೈಎಸ್ ಪಿ ಅಮಾನ್ ಠಾಕೂರ್ ಕತ್ತಿಗೆ ಗುಂಡೇಟು ಬಿದ್ದಿದ್ದು ಹುತಾತ್ಮರಾಗಿದ್ದಾರೆ.
ಇದೇ ಕಾರ್ಯಾಚರಣೆಯಲ್ಲಿ ಸೇನಾ ಮೇಜರ್ ಹಾಗೂ ಇಬ್ಬರು ಯೋಧರು ಸಹ ತೀವ್ರವಾಗಿ ಗಾಯಗೊಂಡಿದ್ದು, ಹವಾಲ್ದಾರ್ ಸೋಂಬಿರ್ ಹುತಾತ್ಮರಾಗಿದ್ದಾರೆ. ಸೇನಾ ಮೇಜರ್ ಸೇರಿ ಗಾಯಗೊಂಡಿರುವ ಮತ್ತಿತರರು ಅಪಾಯದಿಂದ ಪಾರಾಗಿದ್ದಾರೆ.
ಎನ್ ಕೌಂಟರ್ ನಲ್ಲಿ ಹೊಡೆದುರುಳಿಸಲಾಗಿರುವ ಭಯೋತ್ಪಾದಕರ ಗುರುತು ಇನ್ನಷ್ಟೇ ಲಭ್ಯವಾಗಬೇಕಿದೆ.

