ಡೆಡ್ಲಿ ಸ್ನೈಪರ್ ರೈಫಲ್ ಸಿಕ್ಕ ಬೆನ್ನಲ್ಲೇ 5 ಉಗ್ರರನ್ನು ಸದೆಬಡೆದ ಭಾರತೀಯ ಸೇನೆ!
0
ಫೆಬ್ರವರಿ 11, 2019
ನವದೆಹಲಿ: ಭಾರತೀಯ ಯೋಧರ ಕೈಗೆ ಅತ್ಯಾಧುನಿಕ ಡೆಡ್ಲಿ ಸ್ನೈಪರ್ ರೈಫಲ್ ಗಳು ಸಿಕ್ಕಿದ್ದು ಇದರ ಬೆನ್ನಲ್ಲೇ ರಕ್ತಪಾತ ನಡೆಸಲು ಹೊಂಚು ಹಾಕಿ ಕುಳಿತ್ತಿದ್ದ ಐವರು ಭಯೋತ್ಪಾದಕರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.
ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಕೆಲೇಮ್ ಗ್ರಾಮದಲ್ಲಿ ಭಯೋತ್ಪಾದಕರು ಅಡಗಿರುವ ಮಾಹಿತಿ ಕಲೆಹಾಕಿದ ಭಾರತೀಯ ಸೇನೆ ಕಾರ್ಯಾಚರಣೆ ಕೈಗೊಂಡಿದ್ದು ಐವರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ.
ಭಾರತೀಯ ಸೇನೆಯನ್ನು ಕಂಡ ಕೂಡಲೇ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಸಹ ಗುಂಡಿನ ದಾಳಿ ನಡೆಸಿ ಭಯೋತ್ಪಾದಕರನ್ನು ಸದೆಬಡಿದಿದೆ.

