75 ನೇ ವಾರ್ಷಿಕ ಏಕಾಹ ಭಜನೆಯ ಆಮಂತ್ರಣ ಪತ್ರಿಕೆ ಬಿಡುಗಡೆ
0
ಫೆಬ್ರವರಿ 13, 2019
ಕಾಸರಗೋಡು: ರಾಮರಾಜ ಕ್ಷತ್ರಿಯ ಕೋಟೆಯಾರ್ ಸಮಾಜ ಮತ್ತು ಶ್ರೀ ಶಾರದಾ ಭಜನಾ ಸಂಘದ ಆಶ್ರಯದಲ್ಲಿ ಚಂದ್ರಗಿರಿ ಕೀಯೂರು ಶ್ರೀ ಶಾಸ್ತಾ ದೇವಸ್ಥಾನದಲ್ಲಿ ನಡೆಯುವ 75 ನೇ ವಾರ್ಷಿಕ ಏಕಾಹ ಭಜನೆ ಮತ್ತು ವಜ್ರ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಕೀಯೂರು ಕ್ಷೇತ್ರದ ಪ್ರಧಾನ ಅರ್ಚಕ ಬ್ರಹ್ಮಶ್ರೀ ಜಯಪ್ರಸಾದ್ ಅಡಿಗ ಅವರು ದೀಪ ಬೆಳಗಿಸಿ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಶಿವರಾಮ ಪಡುಹಿತ್ಲು, ಅಧ್ಯಕ್ಷ ಮಾಧವ ಪಡುಹಿತ್ಲು, ಕಾರ್ಯದರ್ಶಿ ಹರಿಶ್ಚಂದ್ರ ಚಂದ್ರಗಿರಿ, ಉಪಾಧ್ಯಕ್ಷರಾದ ಕೃಷ್ಣಮೂರ್ತಿ ಚಂದ್ರಗಿರಿ, ಮಂಜುನಾಥ ತೋಟ, ಜತೆ ಕಾರ್ಯದರ್ಶಿಗಳಾದ ಬಾಲಸುಬ್ರಹ್ಮಣ್ಯ ಪಡುಹಿತ್ಲು, ಪುರುಷೋತ್ತಮ ನಡಕ್ಕಾಲ್, ಕೋಶಾ„ಕಾರಿ ತಾರಾನಾಥ ಕೊಪ್ಪಲ್, ಶಾರದಾ ಭಜನಾ ಸಂಘದ ಸರ್ವ ಸದಸ್ಯರು, ವರಮಹಾಲಕ್ಷ್ಮೀ ಮಾತೃ ಮಂಡಳಿಯ ಪದಾ„ಕಾರಿಗಳು ಹಾಗು ಸರ್ವಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.

