ಬಿ.ಇ.ಎಂ. ಪ್ರೌಢ ಶಾಲೆಯಲ್ಲಿ ಮಾರ್ಗದರ್ಶನ ತರಗತಿ
0
ಫೆಬ್ರವರಿ 13, 2019
ಕಾಸರಗೋಡು: ನಗರದ ಬಿ.ಇ.ಎಂ. ಪ್ರೌಢ ಶಾಲೆಯಲ್ಲಿ 10 ನೇ ತರಗತಿಯ ಮಕ್ಕಳು ಮತ್ತು ಹೆತ್ತವರಿಗಾಗಿ ಜೀವನೋಪಾಯ ಕ್ರಮ ಮಾರ್ಗದರ್ಶನ ತರಗತಿ ನಡೆಯಿತು.
ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ನಂದಿಕೇಶನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತರಗತಿಯನ್ನು ನಡೆಸಿಕೊಟ್ಟ ಬಿಆರ್‍ಡಿಸಿಯ ಪ್ರಬಂಧಕ ಯು.ಎಸ್.ಪ್ರಸಾದ್ ಅವರು ಮಕ್ಕಳು ತಮ್ಮ ಮುಂದಿನ ಅಧ್ಯಯನ ವರ್ಷದಲ್ಲಿ ಜೀವನೋಪಾಯ ಕ್ರಮಕ್ಕಾಗಿ ಕಲಿಕೆಗೆ ಯಾವ ವಿಷಯವನ್ನು ಆಯ್ಕೆ ಮಾಡಿಕೊಂಡರೆ ಪ್ರಯೋಜನಕಾರಿ ಎಂಬ ವಿಷಯದಲ್ಲಿ ಮಾಹಿತಿಗಳನ್ನು ನೀಡಿದರು. ಮಕ್ಕಳು ಮತ್ತು ಹೆತ್ತವರು ಈ ತರಗತಿಯ ಪ್ರಯೋಜನವನ್ನು ಪಡೆದುಕೊಂಡರು. ತರಗತಿಯ ಬಳಿಕ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪ್ರೇಮ್‍ಜಿತ್ ಅವರು ಯು.ಎಸ್.ಪ್ರಸಾದ್ ಅವರನ್ನು ಶಾಲು ಹೊದಿಸಿ ಗೌರವಿಸಿದರು.
ಮುಖ್ಯೋಪಾಧ್ಯಾಯ ರಾಜೇಶ್ಚಂದ್ರ ಕೆ.ಪಿ. ಸ್ವಾಗತಿಸಿದರು. ಸ್ಟಾಫ್ ಕಾರ್ಯದರ್ಶಿ ಕನಕರಾಜ ಕೆ. ವಂದಿಸಿದರು. ಕಾರ್ಯಕ್ರಮದಲ್ಲಿ ರಕ್ಷಕ ಶಿಕ್ಷಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಹಾಗು ಅಧ್ಯಾಪಕರು ಭಾಗವಹಿಸಿದರು.

