ಚಿನ್ಮಯ ವಿದ್ಯಾಲಯಕ್ಕೆ `ಅಟಲ್ ಥಿಂಕರಿಂಗ್ ಲ್ಯಾಬ್'ನ ಸದಸ್ಯತ್ವ
0
ಫೆಬ್ರವರಿ 18, 2019
ಕಾಸರಗೋಡು: ಕೇಂದ್ರ ಸರಕಾರದ ನೂತನ ಯೋಜನೆಗಳಲ್ಲೊಂದಾದ `ಅಟಲ್ ಥಿಂಕರಿಂಗ್ ಲ್ಯಾಬ್' ಎಂಬ ಯೋಜನೆಯ ಸದಸ್ಯತ್ವವನ್ನು ಚಿನ್ಮಯ ವಿದ್ಯಾಲಯವು ಗಳಿಸಿದೆ.
ತತ್ಸಂಬಂಧವಾಗಿ ಅಟಲ್ ಥಿಂಕರಿಂಗ್ ಲ್ಯಾಬ್‍ನ ಸದಸ್ಯರೂ, ಮೂಡ್ಲಕಟ್ಟೆ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕುಂದಾಪುರದ ನಿರ್ದೇಶಕರೂ ಆದ ಡಾ.ಅಬ್ದುಲ್ ಕರೀಂ ವಿದ್ಯಾರ್ಥಿಗಳೊಂದಿಗೆ ಈ ಯೋಜನೆಯ ಪ್ರಾಧಾನ್ಯತೆ ಹಾಗು ಗುರಿ ಎಂಬೀ ವಿಷಯಗಳ ಬಗ್ಗೆ ಮಾತನಾಡಿದರು.
ಸಯನ್ಸ್, ಎಂಜಿನಿಯರಿಂಗ್ ವಿಷಯಗಳಲ್ಲಿ ಪರಿಣಿತರಾಗಿ ದೇಶ ಸೇವೆಯನ್ನು ಮಾಡಬೇಕೆಂದೂ ತಂತ್ರಜ್ಞಾನದ ಪ್ರಾಧಾನ್ಯತೆಯನ್ನೂ ವಿದ್ಯಾರ್ಥಿಗಳಿಗೆ ಬೋಧಿಸಿದರು.
ವಿದ್ಯಾಲಯದ ಪ್ರಾಂಶುಪಾಲರಾದ ಬಿ.ಪುಷ್ಪರಾಜ್, ಉಪಪ್ರಾಂಶುಪಾಲೆ ಸಂಗೀತ ಪ್ರಭಾಕರ್, ಅಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

