ಜಿಲ್ಲಾ ವಿಶಾಲ ಕನ್ನಡ ಸಂಗಮ
0
ಫೆಬ್ರವರಿ 18, 2019
ಕಾಸರಗೋಡು: ರಾಜ್ಯ ಸರಕಾರದ ವಿವಿಧ ಇಲಾಖೆಗಳ ಸವಲತ್ತುಗಳು ಜನಸಾಮಾನ್ಯರ ಕೈಗೆಟಕುವಂತಾಗಲು ಕನ್ನಡ ಉದ್ಯೋಗಿಗಳು, ಅಧ್ಯಾಪಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಯತ್ನಿಸಿ ಕನ್ನಡ ಹೋರಾಟಕ್ಕೆ ಹೊಸತನವನ್ನುಂಟು ಮಾಡಬೇಕಾಗಿದೆ ಎಂದು ರಾಜ್ಯ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಸಾಲಿಯಾನ್ ಅಭಿಪ್ರಾಯಪಟ್ಟರು.
ಕಾಸರಗೋಡು ನಗರಸಭಾಂಗಣದಲ್ಲಿ ಸಮನ್ವಯ ಭಾರತ್ ಉತ್ಸವ್ ಕಲೋತ್ಸವದ ಅಂಗವಾಗಿ ಇತ್ತೀಚೆಗೆ ಆಯೋಜಿಸಿದ ಜಿಲ್ಲಾ ವಿಶಾಲ ಕನ್ನಡ ಸಂಗಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾಧಿಕಾರಿ ಕಚೇರಿಯ ಸಾರ್ವಜನಿಕ ಸಂಪರ್ಕ ಕಚೇರಿಯಲ್ಲಿ ಕನ್ನಡ ಅಧಿಕಾರಿಯ ಹೊಸ ಹುದ್ದೆಯೊಂದನ್ನು ಸೃಷ್ಟಿಸಿ ಕಾರ್ಯಪ್ರವೃತ್ತವಾಗಿದೆ. ಇದು ಗಡಿನಾಡಿನ ಭಾಷಾ ಅಲ್ಪಸಂಖ್ಯಾತರಿಗೆ ಸರಕಾರದ ವಿವಿಧ ಕಾನೂನು ಕಟ್ಟಳೆ&ಸವಲತ್ತುಗಳ ಬಗ್ಗೆ ಕಾಲಾಕಾಲಕ್ಕೆ ಅರಿಯುವಲ್ಲಿ ನೆರವಾಗಲಿದೆ ಎಂದರು.
ಪ್ರಾಂತ್ಯ ಕನ್ನಡ ಅಧ್ಯಾಪಕ ಸಂಘದ ಮುಂದಾಳು ಪ್ರಾಂಶುಪಾಲ ಎನ್.ರಾಮಚಂದ್ರ ಭಟ್ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಕನ್ನಡ ಶಾಲಾ ತರಗತಿಗಳಿಗೆ ಮಲಯಾಳ ಅಧ್ಯಾಪಕರ ನೇಮಕಾತಿ ಸೇರಿದಂತೆ ಎಲ್ಲ ಕನ್ನಡ ವಿರೋಧಿ ಚಟುವಟಿಕೆಗಳನ್ನು ಹಿಮ್ಮೆಟ್ಟಿಸಲು ಇಲ್ಲಿನ ಕನ್ನಡಿಗರ ವಿಶಾಲ ಐಕ್ಯರೂಪುಗೊಳ್ಳಲು ಮುತುವರ್ಜಿ ಅಗತ್ಯವಿದೆ ಎಂದರು.
ಅತಿಥಿಯಾಗಿ ಭಾಗವಹಿಸಿದ ಜಿಲ್ಲಾ ಬಿಲ್ಲವ ಒಕ್ಕೂಟದ ಕಾರ್ಯದರ್ಶಿ ಚಂದ್ರಹಾಸ ಪೂಜಾರಿ ಕಡಂಬಾರು ಮಾತನಾಡಿ ಪೂಜಾರಿ ಬೆಳ್ಚಾಡ ಸಮಾಜದ ಯುವಕ ಯುವತಿಯರು ಕನ್ನಡ ಭಾಷೆಯ ಉಳಿವಿಗಾಗಿ ಏಕತೆಯನ್ನು ಪ್ರಕಟಿಸಲು ಮುಂದೆ ಬರಬೇಕೆಂದರು. ವೆಲಂಟೈನ್ ಕ್ರಾಸ್ತಾ, ಆಮು ಅಡ್ಕಸ್ಥಳ, ಎನ್.ನಾಗೇಶ್ ಶೆಣೈ, ಪೆÇ್ರ.ಮಹಮ್ಮದಾಲಿ, ನ್ಯಾಯವಾದಿ ಕೆ.ಎಂ.ಹಸೈನಾರ್, ಬಾಲಕೃಷ್ಣ ಮಾಸ್ತರ್ ಮುಜುಕುಮೂಲೆ ಮಾತನಾಡಿದರು. ದಾಮೋದರ ಮೊಗ್ರಾಲ್‍ಪುತ್ತೂರು ಪ್ರಾಸ್ತಾವಿಕವಾಗಿ ಮಾತನಾಡಿದರು.

