ಕಾಡ್ಗಿಚ್ಚು, ಮಂಗನ ಕಾಯಿಲೆ ಜಾಗೃತಿ ವಿಚಾರಗೋಷ್ಠಿ ಮತ್ತು ಯಕ್ಷಗಾನ ತಾಳಮದ್ದಳೆ
0
ಫೆಬ್ರವರಿ 18, 2019
ಮುಳ್ಳೇರಿಯ: ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಕೀರಿಕ್ಕಾಡು ಸ್ಮಾರಕ ಸಭಾ ಭವನದಲ್ಲಿ ಪರಪ್ಪ ಅರಣ್ಯಾಧಿಕಾರಿ ಸತ್ಯನ್ ಎನ್.ವಿ. ಮತ್ತು ಸಿಬ್ಬಂದಿಗಳ ನೇತೃತ್ವದಲ್ಲಿ ಕಾಡ್ಗಿಚ್ಚಿನಿಂದ ಅರಣ್ಯ ಸಂರಕ್ಷಣೆ, ಮಂಗನ ಕಾಯಿಲೆ ನಿವಾರಣೋಪಾಯ ಕುರಿತಾದ ವಿಚಾರಗೋಷ್ಠಿ ಮತ್ತು ಚಿತ್ರ ಪ್ರಾತ್ಯಕ್ಷಿಕೆ ನಡೆಯಿತು.
ವಿಶ್ವವಿನೋದ ಬನಾರಿ ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯ ಐತ್ತಪ್ಪ ನಾಯ್ಕ್ ಮಯ್ಯಾಳ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬೆಳ್ಳಿಪ್ಪಾಡಿ ಸದಾಶಿವ ರೈ, ಗ್ರಾಮ ಪಂಚಾಯತಿ ಸದಸ್ಯ ಕೊರಗಪ್ಪ ರೈ ಮಯ್ಯಾಳ, ಬಾಲಕೃಷ್ಣ ಗೌಡ ದೇಲಂಪಾಡಿ ಶುಭಹಾರೈಸಿದರು.
ಭಾಸ್ಕರನ್ ವೆಳ್ಳೂರು ಹಾಗು ಅಡೂರು ಪ್ರಾಥಮಿಕ ಕೇಂದ್ರಾಧಿಕಾರಿ ಹಫೀಸ್ ಕಾಡ್ಗಿಚ್ಚು ಮತ್ತು ಮಂಗನ ಕಾಯಿಲೆ ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ವಿಚಾರಗೋಷ್ಠಿ ನಡೆಸಿಕೊಟ್ಟರು. ವಿನೀತ್ ಅವರು ಸಹಕರಿಸಿದರು. ನಾರಾಯಣ ದೇಲಂಪಾಡಿ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.
ವಿಶ್ವ ವಿನೋದ ಬನಾರಿ ವಿರಚಿತ `ಅರಣ್ಯ ಸಂರಕ್ಷಣೆ' ಕಾಲ್ಪನಿಕ ಯಕ್ಷಗಾನ ತಾಳಮದ್ದಳೆಯು ಪ್ರಸ್ತುತಗೊಂಡಿತು. ಭಾಗವತರಾಗಿ ದಯಾನಂದ ಬಂದ್ಯಡ್ಕ, ಮೋಹನ ಮೆಣಸಿನಕಾನ ಸಹಕರಿಸಿದರು. ಚೆಂಡೆ ಮದ್ದಳೆ ವಾದನದಲ್ಲಿ ಅಪ್ಪಯ್ಯ ಮಣಿಯಾಣಿ ಮಂಡೆಕೋಲು, ವಿಷ್ಣು ಶರಣ ಬನಾರಿ, ಸದಾನಂದ ಪೂಜಾರಿ ಮಯ್ಯಾಳ, ಕೃಷ್ಣ ಪ್ರಸಾದ್ ಬೆಳ್ಳಿಪ್ಪಾಡಿ ಸಹಕರಿಸಿದರು. ರಜತ್ ಡಿ.ಆರ್. ಚಕ್ರತಾಳದಲ್ಲಿ ಸಹಕರಿಸಿದರು. ಪಾತ್ರಧಾರಿಗಳಾಗಿ ವೆಂಕಟ್ರಮಣ ಮಾಸ್ತರ್ ದೇಲಂಪಾಡಿ, ಎಂ.ರಮಾನಂದ ರೈ ದೇಲಂಪಾಡಿ, ರಾಮಣ್ಣ ಮಾಸ್ತರ್ ದೇಲಂಪಾಡಿ, ಎ.ಜಿ.ಮುದಿಯಾರು, ನಾರಾಯಣ ಡಿ., ರಾಮ ನಾಯ್ಕ್ ದೇಲಂಪಾಡಿ, ವೀರಪ್ಪ ಸುವರ್ಣ ನಡುಬೈಲು, ಶೇಖರ ಪಾಟಾಳಿ ಕಲ್ಲರ್ಪೆ ಅವರು ಭಾಗವಹಿಸಿದರು.
ಶ್ರೀ ಗೋಪಾಲಕೃಷ್ಣ ದೇವರ ಪೂಜಾರ್ಚನೆಯೊಂದಿಗೆ ಪರಪ್ಪ ರಕ್ಷಿತಾರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬನಾರಿ ಕಲಾ ಸಂಘದ ಸಹಯೋಗದೊಂದಿಗೆ ಆಯೋಜಿಸಿದ ಈ ಜನಜಾಗೃತಿ ಯೋಜನಾ ಕಾರ್ಯಕ್ರಮವು ಮನೋಜ್ಞವಾಗಿ ಮೂಡಿಬಂತು. ಸತ್ಯನ್ ಎನ್.ವಿ. ವಂದಿಸಿದರು.

