ಫೆ.20-21 : ಬ್ರಹ್ಮಕಲಶೋತ್ಸವದ ವಾರ್ಷಿಕೋತ್ಸವ
0
ಫೆಬ್ರವರಿ 18, 2019
ಮಂಜೇಶ್ವರ: ಕೋಳ್ಯೂರು ಸಿಂತಾಜೆ ಕೋರಿಕ್ಕಾರ್ ಭಂಡಸಾಲೆ ಕಳಿಯೂರು ಶ್ರೀ ಕಲ್ಲುರ್ಟಿ ಕಲ್ಕುಡ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ 5 ನೇ ವಾರ್ಷಿಕೋತ್ಸವ, ವರ್ಷಾವಧಿ ಕೋಲ, ಶ್ರೀ ದೈವಗಳಿಗೆ ಅಗೆಲು ಸೇವೆ ಫೆ.20 ಮತ್ತು 21 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಫೆ.20 ರಂದು ಬೆಳಗ್ಗೆ 8 ಕ್ಕೆ ಸ್ಥಳ ಶುದ್ಧಿ, ಗಣಹೋಮ ಹಾಗು ದೈವಗಳಿಗೆ ತಂಬಿಲ, ಮಧ್ಯಾಹ್ನ 1 ಕ್ಕೆ ಅನ್ನದಾನ, ಸಂಜೆ 5 ರಿಂದ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನೃತ್ಯ ವೈವಿಧ್ಯ, ರಾತ್ರಿ 8 ಕ್ಕೆ ಅನ್ನದಾನ, 9 ರಿಂದ ಶ್ರೀ ಕಲ್ಲುರ್ಟಿ ಕಲ್ಕುಡ ದೈವಗಳಿಗೆ ವರ್ಷಾವಧಿ ಕೋಲ, ಫೆ.21 ರಂದು ಅಪರಾಹ್ನ 12 ಕ್ಕೆ ಶ್ರೀ ಕಲ್ಲುರ್ಟಿ ಕಲ್ಕುಡ ದೈವಗಳಿಗೆ ವಾರ್ಷಿಕ ಅಗೆಲು ಸೇವೆ ನಡೆಯಲಿದೆ.

