ಯುವ ಸಾಧಕರಿಗೆ ಅಭಿನಂದನೆ
0
ಫೆಬ್ರವರಿ 18, 2019
ಬದಿಯಡ್ಕ: ಶ್ರೀ ಕ್ಷೇತ್ರ ಅಗಲ್ಪಾಡಿಯ ವರ್ಷಾವಧಿ ಉತ್ಸವದ ಸಂದರ್ಭದಲ್ಲಿ ಉಪ್ಪಂಗಳ ಟ್ರಸ್ಟ್, ಕ್ರಿಯೇಟಿವ್ ಕಾಲೇಜು ಬದಿಯಡ್ಕ ಇದರ ವತಿಯಿಂದ ಯುವ ಸಾಧಕರನ್ನು ಅಭಿನಂದಿಸಲಾಯಿತು.
ಖ್ಯಾತ ಶಿಕ್ಷಣ ತಜ್ಞ, ಚಿನ್ಮಯ ವಿದ್ಯಾಲಯ ಕಾಸರಗೋಡಿನ ಪ್ರಾಂಶುಪಾಲ ಪುಷ್ಪರಾಜ್, ಅಂತಾರಾಷ್ಟ್ರೀಯ ಉತ್ಸವಗಳಲ್ಲಿ ಭರತನಾಟ್ಯ ಕಾರ್ಯಕ್ರಮಗಳನ್ನಿತತ್ತ ಧನ್ಯಾ ರಾಘವ, ರಾಷ್ಟ್ರ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ವಿಜಯಿಯಾದ 16 ವರ್ಷದ ಗಗನ್ ಭಾರದ್ವಾಜ್ ಅವರನ್ನು ಅಭಿನಂದಿಸಲಾಯಿತು.
ಸಮಾರಂಭದ ಮುಖ್ಯ ಅತಿಥಿಯಾಗಿ ಉದ್ಯಮಿ, ಶ್ರೀ ಕ್ಷೇತ್ರದ ನೂತನ ಟ್ರಸ್ಟಿ ಎ.ಜಿ.ಶರ್ಮಾ ಕೋಳಿಕ್ಕಜೆ ಸಾಧಕರನ್ನು ಅಭಿನಂದಿಸಿ ಬೋಧಕರು ಸಿಗುತ್ತಾರೆ, ಸಾಧಕರು ಸಿಗುವುದು ವಿರಳ ಎಂದರು.
ಉಪ್ಪಂಗಳ ಟ್ರಸ್ಟ್‍ನ ಶ್ರೀಹರಿ ಭಟ್ ಸಜಂಗದ್ದೆ, ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಕೆ.ಎಸ್.ಎನ್.ಪ್ರಸಾದ್, ಪ್ರಾಂಶುಪಾಲ ಸಿ.ಎಚ್.ಶಿವದಾಸ ಮೊದಲಾದವರು ಉಪಸ್ಥಿತರಿದ್ದರು.
ಉಪ್ಪಂಗಳ ಟ್ರಸ್ಟ್ ತೀರ ಗ್ರಾಮೀಣ ಪ್ರದೇಶದಲ್ಲಿ ವಿವಿಧ ಸಾಮಾಜಿಕ ಚಟುವಟಿಕೆಗಳನ್ನು ಮಾಡುತ್ತಿದ್ದು ಇದೀಗ ವಿದ್ಯಾದಾನವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಅಭಿವಂದಿತರ ಪರವಾಗಿ ಅಭಿನಂದನೆ ಸ್ವೀಕರಿಸಿದ ಪುಷ್ಪರಾಜ್ ಅವರು ಹೇಳಿದರು. ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ರಂಗ ಶರ್ಮಾ ಉಪ್ಪಂಗಳ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸ್ಮಿತಾ ಉದಯ್ ಉಬ್ರಂಗಳ ಅಭಿನಂದನಾ ಭಾಷಣಗೈದರು. ಈ ಸಂದರ್ಭದಲ್ಲಿ ಪುತ್ತೂರಿನ ಮುಳಿಯ ಜ್ಯುವೆಲ್ಸ್ ಸಭಿಕರಿಗೆ ಆಭರಣಗಳ ಗ್ಗೆ ಪ್ರಶ್ನೋತ್ತರ ಕಾರ್ಯಕ್ರಮ ನೆರವೇರಿಸಿ ಬಹುಮಾನಗಳನ್ನು ನೀಡಿತು. ಮಾನಸ ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಸಾಂಸ್ಕøತಿಕ ವೈಭವ ನಡೆಯಿತು.

