ಯುವ ಭಾರತಿ ವತಿಯಿಂದ ಯೋಧರಿಗೆ ಶ್ರದ್ಧಾಂಜಲಿ
0
ಫೆಬ್ರವರಿ 18, 2019
ಉಪ್ಪಳ: ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೆÇೀರಾದಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ಭಾರತೀಯ ಯೋಧರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಯುವ ಭಾರತಿ ವತಿಯಿಂದ ಶನಿವಾರ ಸಂಜೆ ಉಪ್ಪಳ ಪೇಟೆಯಲ್ಲಿ ಹಣತೆಯನ್ನು ಬೆಳಗಿಸುವುದರ ಮೂಲಕ ನಡೆಸಲಾಯಿತು.
ಕಾರ್ಯಕ್ರಮದಲ್ಲಿ 35 ವರ್ಷಗಳಿಂದ ಸೈನ್ಯದಲ್ಲಿ ಸೇವೆಯನ್ನು ಸಲ್ಲಿಸಿದ ಯೋಧ ಆನಂದ ಭಗವತೀ ಗೇಟ್,ಪ್ರಸಕ್ತ ಭಾರತೀಯ ಸೇನೆಯಲ್ಲಿ ಪ್ಯಾರಾ ಕಮಾಂಡೋ ಆಗಿ ಸೇವೆಯನ್ನು ಸಲ್ಲಿಸುತ್ತಿರುವ ಸನೀಶ್ ಕುಮಾರ್ ಉಪ್ಪಳ ಉಪಸ್ಥಿತರಿದ್ದರು. ಯುವ ಭಾರತಿ ಉಪ್ಪಳ ಇದರ ಹಿರಿಯ ಕಾರ್ಯಕರ್ತರಾದ ವಸಂತ ಕೊಂಡೆವೂರು ಯೋಧರ ತ್ಯಾಗ ಶೌರ್ಯಗಳ ಸ್ಮರಣೆ ಮಾಡಿ ಭಯೋತ್ಪಾದಕರ ಹೀನ ದಾಳಿಯನ್ನು ಖಂಡಿಸಿದರು.
ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಾಮೂಹಿಕವಾಗಿ ಹಣತೆಯನ್ನು ಬೆಳಗಿಸಲಾಯಿತು ಮತ್ತು ಹುತಾತ್ಮ ಯೋಧರಿಗೆ ಗೌರವಾರ್ಪಾಣೆಯ ಭಾಗವಾಗಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ದೇಶಪ್ರೇಮಿ ಬಂಧುಗಳು ಭಾಗವಹಿಸಿದ್ದರು. ಯುವ ಭಾರತಿ ಸಂಘಟನಾ ಕಾರ್ಯದರ್ಶಿ ಜಗದೀಶ ಪ್ರತಾಪನಗರ ಸ್ವಾಗತಿಸಿದರು. ಯುವ ಭಾರತಿ ಅಧ್ಯಕ್ಷರಾದ ರತೀಶ ಐಲ ವಂದಿಸಿದರು.

