ಯುವ ಕಾರ್ಯಕರ್ತರ ಹತ್ಯೆ ಖಂಡಿಸಿ ಯುಡಿಎಫ್ ಪ್ರತಿಭಟನೆ
0
ಫೆಬ್ರವರಿ 18, 2019
ಪೆರ್ಲ: ಪೆರಿಯದಲ್ಲಿ ಭಾನುವಾರ ರಾತ್ರಿ ಯುವ ಕಾಂಗ್ರೆಸ್ಸ್ ಕಾರ್ಯಕರ್ತರಿಬ್ಬರ ಹತ್ಯೆಯನ್ನು ಖಂಡಿಸಿ ಎಣ್ಮಕಜೆ ಪಂಚಾಯತಿ ಯುಡಿಎಫ್ ಸಮಿತಿ ನೇತೃತ್ವದಲ್ಲಿ ಪೆರ್ಲ ಪೇಟೆಯಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಯಿತು.
ಎಣ್ಮಕಜೆ ಮಂಡಲ ಕಾಂಗ್ರೆಸ್ಸ್ ಅಧ್ಯಕ್ಷ ಬಿ.ಎಸ್.ಗಾಂಭೀರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಹತ್ಯೆಯನ್ನು ಕಟುವಾಗಿ ಟೀಕಿಸಿದರು. ಜಿಲ್ಲಾ ಕಾಂಗ್ರೆಸ್ಸ್ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಜೆ.ಎಸ್, ಯುಡಿಎಫ್ ನೇತಾರರಾದ ಸಿದ್ದಿಕ್ ಹಾಜಿ ಖಂಡಿಗೆ, ಅಬ್ದುಲ್ ರಹಿಮಾನ್, ಸಿದ್ದೀಕ್ ಒಳಮೊಗರು, ಐತ್ತಪ್ಪ ಕುಲಾಲ್, ವಿಲ್ಪ್ರೆಡ್ ಡಿಸೋಜಾ, ಅಬ್ದುಲ್ ರಝಾಕ್ ನಲ್ಕ, ಅಬ್ದುಲ್ಲ ಕರೆಡ್ಕ, ನವೀನ ನಾಯಕ್, ಸುಧಾಕರ ರೈ, ಅಶ್ರಫ್ ಮತ್ರ್ಯ, ಶಾಹುಲ್ ಹಮೀದ್, ಎ.ಕೆ.ಶರೀಫ್, ಶ್ರೀನಿವಾಸ ಶೇಣಿ, ಲಕ್ಷ್ಮಣ ಪಡ್ಪು ಮೊದಲಾದವರು ಪ್ರತಿಭಟನಾ ಮೆರವಣಿಗೆಯ ನೇತೃತ್ವ ವಹಿಸಿದ್ದರು. ಅಬೂಬಕರ್ ಪೆರ್ದನೆ ಸ್ವಾಗತಿಸಿ, ರವೀಂದ್ರನಾಥ ನಾಯಕ್ ಶೇಣಿ ವಂದಿಸಿದರು.

