ಕಾರಡ್ಕ ಬ್ಲಾಕ್ ಪಂಚಾಯತಿ ಬಜೆಟ್ ಮಂಡನೆ
0
ಫೆಬ್ರವರಿ 14, 2019
ಮುಳ್ಳೇರಿಯ: ಕಾರಡ್ಕ ಬ್ಲಾಕ್ ಪಂಚಾಯತಿಯ 2019-20ನೇ ವರ್ಷದ ಬಜೆಟ್ ಬುಧವಾರ ಮಂಡಿಸಲ್ಪಟ್ಟಿತು.
369295433 ರೂ. ಆದಾಯ, 369150433 ರೂ.ವೆಚ್ಚ, 145000 ರೂ.ನ ಮಿಗತೆಯ ಮುಂಗಡಪತ್ರ ಮಂಡನೆಯಾಗಿದೆ. ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಓಮನಾ ರಾಮಚಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಿ.ಕೆ.ಕುಮಾರನ್ ಬಜೆಟ್ ಮಂಡನೆ ಮಾಡಿದರು.
ವಸತಿ ನಿರ್ಮಾಣ, ಸಾಂತ್ವನ ಕಾರ್ಯಕ್ರಮ ಇತ್ಯಾದಿಗಳಿಗೆ ಆದ್ಯತೆ ನೀಡುವ ಬಜೆಟ್ ಮಂಡಿಸಲಾಗಿದೆ. ತ್ಯಾಜ್ಯ ಪರಿಷ್ಕರಣೆ, ಕಲಾ-ಕ್ರೀಡಾ ಅಭಿವೃದ್ಧಿ, ಪಾಲಿಯೇಟಿವ್ ಕೇರ್, ವಯೋಮಿತ್ರ ಯೋಜನೆ, ಜೈವಿಕ ಕೃಷಿ, ಹಿನ್ನೆಲೆ ಸೌಲಭ್ಯ ಇತ್ಯಾದಿಗಳಿಗೆ ಮಹತ್ವ ನೀಡಲಾಗಿದೆ.
ಬ್ಲಾಕ್ ಪಂಚಾಯತಿ ಸದಸ್ಯರು, ವಿವಿಧ ಗ್ರಾಮಪಂಚಾಯತಿ ಅಧ್ಯಕ್ಷೆ ಅನುಸೂಯ ರೈ, ನ್ಯಾಯವಾದಿ ಸಿ.ರಾಮಚಂದ್ರನ್, ಮುಸ್ತಫ, ಲಿಸಿ ಥಾಮಸ್, ನಿರ್ವಹಣೆ ಸಿಬ್ಬಂದಿ, ಯೋಜನೆ ಸಮಿತಿ ಸದಸ್ಯರು, ಜನಪ್ರತಿನಿಧಿಗಳು ಮೊದಲಾದವರು ಉಪಸ್ಥಿತರಿದ್ದರು.
ಬ್ಲಾಕ್ ಪಂಚಾಯತಿ ಕಾರ್ಯದರ್ಶಿ ಬಾಲಕೃಷ್ಣ ಬಿ. ಸ್ವಾಗತಿಸಿ, ಹೆಚ್ಚುವರಿ ಬ್ಲಾಕ್ ಅಭಿವೃದ್ದಿ ಅಧಿಕಾರಿ ಸುಂದರ ಕೆ. ವಂದಿಸಿದರು.

