ಬದಿಯಡ್ಕ: ಬದಿಯಡ್ಕದ ರಂಗಸಿರಿ ಸಾಂಸ್ಕøತಿಕ ವೇದಿಕೆಯ ವಿದ್ಯಾರ್ಥಿನಿ, ಯಕ್ಷರಂಗದ ಯುವ ಪ್ರತಿಭೆ, ವಿದ್ಯಾ ಕುಂಟಿಕಾನಮಠ ಅವರ ಏಕವ್ಯಕ್ತಿ ಯಕ್ಷಗಾನವು ಸವಣೂರಿನ ವಿನಾಯಕ ಸಭಾಭವನದಲ್ಲಿ ನಡೆಯಿತು.
ವರುಣ್ ಕಲಾ ಸಾಹಿತ್ಯ ಸಾಂಸ್ಕøತಿಕ ಸಂಸ್ಥೆಯು ನಡೆಸಿದ ಕನ್ನಡ ನಾಡು ಸಂಸ್ಕøತಿ ಸಾಹಿತ್ಯ ಸಮ್ಮೇಳನದಂಗವಾಗಿ ಕಾರ್ಯಕ್ರಮವು ಆಯೋಜನೆಗೊಂಡಿತ್ತು. ಸವ್ಯಸಾಚಿ ಯಕ್ಷಗುರು ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ನಿರ್ದೇಶನದಲ್ಲಿ ಸುದರ್ಶನ ವಿಜಯದ ಸುದರ್ಶನ ಪಾತ್ರವಾಗಿ ವಿದ್ಯಾ ಕುಂಟಿಕಾನಮಠ ಸಭಿಕರ ಮೆಚ್ಚುಗೆ ಗಳಿಸಿದಳು. ವೀರ ಹಾಗೂ ಕರುಣ ರಸ ಭರಿತವಾದ ಈ ಕಥಾ ಭಾಗವನ್ನು ಯಶಸ್ವಿಯಾಗಿ ಪ್ರದರ್ಶಿಸಿ ಸೈಯೆನಿಸಿದರು. ಭಾಗವತರಾಗಿ ಜಯರಾಮ ಅಡೂರು, ಚೆಂಡೆಯಲ್ಲಿ ಶ್ರೀಧರ ಎಡಮಲೆ, ಮದ್ದಳೆಗಾರರಾಗಿ ಸೂರ್ಯನಾರಾಯಣ ಪದಕಣ್ಣಾಯ, ಚಕ್ರತಾಳ ಹಾಗೂ ನೇಪಥ್ಯದಲ್ಲಿ ಕೇಶವ ಆಚಾರ್ಯ ಕಿನ್ಯ ಸಹಕರಿಸಿದರು. ರಂಗಸಿರಿಯ ಸ್ಥಾಪಕ ಕಾರ್ಯದರ್ಶಿ ಶ್ರೀಶ ಕುಮಾರ ಪಂಜಿತ್ತಡ್ಕ ನಿರೂಪಣೆ ಮಾಡಿ, ವಂದಿಸಿದರು.