ತಿರುವನಂತಪುರ: ಇತಿಹಾಸ ಪ್ರಸಿದ್ಧವೂ, ಗಿನ್ನೆಸ್ ದಾಖಲೆಯಾಗಿರುವ ತಿರುವನಂತಪುರದ ಆಟ್ಟುಕ್ಕಲ್ ಶ್ರೀ ಭಗವತೀ ಕ್ಷೇತ್ರದಲ್ಲಿ ಪೊಂಗಾಲ್ ಉತ್ಸವ ಶುಕ್ರವಾರ ಆರಂಭಗೊಂಡಿತು.
ಫೆ. 21ರ ವರೆಗೆ ನಡೆಯುವ ಉತ್ಸವದ ಪ್ರಥಮ ದಿನ ಬೆಳಿಗ್ಗೆ ನಿರ್ಮಾಲ್ಯ ದರ್ಶನ, ಅಭಿಷೇಕ ದೀಪಾರಾಧನೆ, ಉಷ:ಪೂಜೆ, ಕಲಶಾಭಿಷೇಕ, ಮಧ್ಯಾಹ್ನ ಪೂಜೆ, ಸಂಜೆ ದೀಪಾರಾಧನೆ, ಭಗವತಿ ಸೇವೆ, ಅತ್ತಾಳ ಪೂಜೆ, ಅತ್ತಾಳ ಶ್ರೀ ಬಲಿ ಮೊದಲಾದವು ಜರಗಿದವು.

ಏನು ವಿಶೇಷ:
ತಿರುವನಂತಪುರ ಸಮೀಪದಲ್ಲಿರುವ ಅಟುಕ್ಕಾಲ್ ಶ್ರೀಭಗವತೀ ಕ್ಷೇತ್ರವು ಜಗತ್ತಿನಲ್ಲೇಅಯಧಿಕ ಸಂಖ್ಯೆಯುಲ್ಲಿ ಮಹಿಳೆಯರು ಒಟ್ಟು ಸೇರುವ ಏಕೈಕ ಉತ್ಸವವಾಗಿ ಹೆಸರುಗಳಿಸಿದೆ. ಶ್ರೀಭಗವತೀ ಮಾತೆಗೆ ಸಿಹಿ ಪೊಂಗಾಲ್ ಅನ್ನು ಲಕ್ಷಾಂತರ ಸಂಖ್ಯೆಯಲ್ಲಿ ಜೊತೆ ಸೇರಿ ತಯಾರಿಸುವುದು ಇಲ್ಲಿಯ ವಿಶೇಷತೆಯಾಗಿದೆ. ಮಲೆಯಾಳ ಮಾಸದ ಮಕರ ಕುಂಭದಿಂದ ಮುಂದಿನ ಹತ್ತು ದಿನಗಳಕಾಲ ವರ್ಷಂಪ್ರತಿ ಈ ಉತ್ಸವ ನಡೆಸಲ್ಪಡುತ್ತದೆ. ಜೊತೆಗೆರಾತ್ರಿ ಹೊತ್ತು ಕುರುದಿ ತರ್ಪಣ ನೀಡುವ ವಿಶೇಷ ಕ್ರಮವೂ ನಡೆಯಲ್ಪಡುತ್ತದೆ. ಮಹಿಳೆಯರು ಮಾತ್ರ ನಡೆಸುವ ಈ ಮಹೋನ್ನತ ಉತ್ಸವಕ್ಕಾಗಿ ತಿರುವನಂತಪುರದ ಬೀದಿ-ಬೀದಿಗಳು ತಳಿರು ತೋರಣ-ವಿದ್ಯುತ್ ದೀಪಗಳಿಂದ ಅಲಂಕೃತವಾಗಿರುತ್ತದೆ.