ಪುಲ್ವಾಮಾ ದಾಳಿ ಸಂಚುಕೋರರ ಅಬ್ದುಲ್ ರಶೀದ್ ಗಾಜಿ ಇರುವಿಕೆ ಪತ್ತೆ ?
0
ಫೆಬ್ರವರಿ 17, 2019
ಹೊಸದಿಲ್ಲಿ : ಪುಲ್ವಾಮಾ ಉಗ್ರ ದಾಳಿಯ ಮುಖ್ಯ ಸಂಚುಕೋರ ಅಬ್ದುಲ್ ರಶೀದ್ ಗಾಜಿ ಎಲ್ಲಿದ್ದಾನೆ ಎಂಬುದನ್ನು ಪತ್ತೆ ಹಚ್ಚಲಾಗಿದೆ. ಆತನು ಪುಲ್ವಾಮಾ ಅಥವಾ ತ್ರಾಲ್ ಸಮೀದದ ಅರಣ್ಯದಲ್ಲಿ ಒಂದೆಡೆ ಅವಿತು ಪುಲ್ವಾಮಾ ಪಿತೂರಿ ಮತ್ತು ದಾಳಿ ಯೋಜನೆ ಮಾಡಿರುವುದಾಗಿ ಭದ್ರತಾ ಪಡೆಗಳು ಶಂಕಿಸಿವೆ.
ಗಾಜಿ ಗೆ ಪಾಕಿಸ್ಥಾನದಲ್ಲಿರುವ ಜೆಇಎಂ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ನಿಂದ ನೇರವಾಗಿ ನಿರ್ದೇಶಗಳು ಬರುತ್ತಿದ್ದುದಾಗಿ ಶಂಕಿಸಲಾಗಿದೆ. ಭಾರತದಲ್ಲಿ ಭಾರೀ ದೆuಟಿಜeಜಿiಟಿeಜಡ್ಡ ಮಟ್ಟದಲ್ಲಿ ಉಗ್ರ ದಾಳಿ ನಡೆಸುವುದೇ ಮಸೂದ್ ಅಜರ್ ನ ಮಹತ್ವಾಕಾಂಕ್ಷೆಯಾಗಿತ್ತು ಎಂದು ತಿಳಿಯಲಾಗಿದೆ.
ಗಾಜಿಯನ್ನು ಜೀವಂತ ಸೆರೆ ಹಿಡಿಯವ ಪ್ರಯತ್ನಗಳು ಈಗ ನಡೆಯುತ್ತಿದ್ದು ಭದ್ರತಾ ಪಡೆಗಳಿಗೆ ಇದರಲ್ಲಿ ಯಶಸ್ಸು ಸಿಗುವ ವಿಶ್ವಾಸವಿದೆ.
ಜೈಶ್ ಉಗ್ರ ಸಂಘಟನೆ ಭಾರತೀಯ ಯೋಧರನ್ನು ಅಥವಾ ಭದ್ರತಾ ಸೌಕರ್ಯವನ್ನು ಗುರಿ ಇರಿಸಿ ದೆuಟಿಜeಜಿiಟಿeಜಡ್ಡ ಮಟ್ಟದಲ್ಲಿ ದಾಳಿ ನಡೆಸುವ ಸಂಭವವಿದೆ ಎಂಬ ಗುಪ್ತಚರ ಮಾಹಿತಿ ತಿಂಗಳ ಹಿಂದೆಯೇ ಇತ್ತಾದರೂ ಇದನ್ನು ಸಾಮಾನ್ಯ ಮಾಹಿತಿ ಎಂದು ತಿಳಿಯಲಾಗಿತ್ತೆಂಬ ಶಂಕೆಯೂ ವ್ಯಕ್ತಗೊಂಡಿದೆ.

