HEALTH TIPS

ಕೇರಳ ಸರಕಾರದ ಪ್ರವಾಸೋಧ್ಯಮ ಇಲಾಖೆಯ ವತಿಯಿಂದ ನಿರ್ಮಿಸಲಾದ ಕಾಸ್ರೋಟ್ ಕೆಫೆ ಸಚಿವ ಇ ಚಂದ್ರಶೇಖರನ್ ಉದ್ಘಾಟನೆ

ಮಂಜೇಶ್ವರ : ಎಲ್ ಡಿ ಎಫ್ ಸರಕಾರದ ಕೇರಳವನ್ನು ಅಭಿವೃದ್ದಿಯ ಪಥದತ್ತ ಕೊಂಡೊಯ್ಯುತ್ತಿರುವ ಯೋಜನೆಯ ಭಾಗವಾಗಿ ಕೇರಳ ಕರ್ನಾಟಕ ಗಡಿ ಪ್ರದೇಶವಾದ ತಲಪಾಡಿ ಅರ್ ಟಿ ಓ ತಪಾಸಣಾ ಕೇಂದ್ರದ ಸಮೀಪದಲ್ಲಿ ``ಕಾಸ್ರೋಟ್ ಕೆಫೆ'' ಎಂಬ ಹೆಸರಿನಲ್ಲಿ ಸ್ಥಾಪಿಸಲಾದ ಕೆಫೆಯನ್ನು ಕೇರಳ ಕಂದಾಯ ಸಚವ ಇ ಚಂದ್ರಶೇಖರನ್ ಶನಿವಾರ ಬೆಳಿಗ್ಗೆ ಉದ್ಘಾಟಿಸಿದರು. ಕಾಸರಗೋಡು ಜಿಲ್ಲಾಧಿಕಾರಿ ಸಜಿತ್ ಬಾಬು ಅಧ್ಯಕ್ಷತೆ ವಹಿಸಿದರು. ಕಾಸರಗೋಡ ಜಿಲ್ಲೆಯ ತಲಪಾಡಿಯಿಂದ ಕಾಲಿಕಡವು ತನಕದ ರಾಷ್ಟ್ರೀಯ ಹೆದ್ದಾರಿ ಬದಿಗಳಲ್ಲಿ ಸುಮಾರು ಎಂಟು ಈ ರೀತಿಯ ಯೋಜನೆಗಳನ್ನು ರೂಪೀಕರಿಸಲಾಗಿದೆ. ಯಾತ್ರಿಕರಿಗೆ ಅಲ್ಪ ವಿಶ್ರಾಂತಿಯನ್ನು ಪಡೆಯಲು, ಅವರಿಗೆ ಆವಶ್ಯಕವಾದ ಉತ್ತಮ ಆಹಾರವನ್ನು ನೀಡುವ ಉದ್ದೇಶದಿಂದ ಸರಕಾರ ಇಂತಹ ಕೆಫೆಗಳನ್ನು ಸ್ಥಾಪಿಸಿದೆ. ಈ ಕಾರ್ಯಕ್ರಮಕ್ಕೆ ಮಂಜೇಶ್ವರದ ಯುಡಿಎಫ್ ನಯಾವುದೇ ಜನಪ್ರತಿನಿಧಿಗಳು ಹಾಜರಗದೇ ಬಹಿಷ್ಕರಿಸಿರುವುದಕ್ಕೆ ಜಿಲ್ಲಾಧಿಕಾರಿಯವರು ದುಃಖವನ್ನು ವ್ಯಕ್ತಪಡಿಸಿದರು. ನಾಡಿನ ಅಭಿವೃದ್ದಿಪರವಾದ ಕಾರ್ಯಕ್ರಮಗಳಿಂದ ಹಿಂದಕ್ಕ ಸರಿಯುವುದು ಸರಿಯಲ್ಲ ಎಂಬುದಾಗಿ ಹೇಳಿದರು. ಆದರೆ ಕಾರ್ಯಕ್ರಮಕ್ಕೆ ಯುಡಿಎಫ್ ಹೇರಿದ್ದ ಬಹಿಷ್ಕಾರದ ಮಧ್ಯೆಯೂ ಬೆಳಿಗ್ಗೆಯಿಂದಲೇ ಕಾರ್ಯಕ್ರಮಕ್ಕೆ ಆಗಮಿಸಿದ ವಾರ್ಡ್ ಸದಸ್ಯೆ ಮಾದ್ಯಮದವರನ್ನು ನೋಡಿ ಅಲ್ಲಿಂದ ನಾಗಾಲೋಟದಿಂದ ಜಾರಿದ ದೃಶ್ಯವೂ ಕಂಡು ಬಂತು. ಸಿಪಿಐ ನೇತರರಾದ ಜಯರಮ್ ಬಲ್ಲಂಗಡೇಲ್, ದಯಾಕರ ಮಾಡ, ಡಿ ವೈ ಎಫ್ ಐ ಕುಂಜತ್ತೂರ ವಿಲೇಜ್ ಸಮಿತಿ ಅಧ್ಯಕ್ಷ ಮುನೀರ್ ತೂಮಿನಾಡು, ಕೆಫೆಯನ್ನು ಚಲಾಯಿಸಲು ಗುತ್ತಿಗೆಗೆ ಪಡೆದ ಶಾಜಿ ಕಣ್ಣನ್, ಅಕ್ತರ್ ಹುಸೈನ್, ಸಲೀಂ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಬಿಜು ರಾಘವನ್ ಸ್ವಾಗತಿಸಿ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries