ಮಧೂರು: ಅರಂತೋಡು ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಉತ್ಸವ ಭಾನುವಾರ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಬೆಳಿಗ್ಗೆ 6.30ಕ್ಕೆ ಗಣಪತಿ ಹೋಮ, 8 ರಿಂದ ಶತರುದ್ರಾಭಿಷೇಕ ನಡೆಯಿತು. ಬಳಿಕ 10.30ರಿಂದ ಕಾಸರಗೋಡಿನ ಪದ್ಮಪ್ರಿಯ ಮಹಿಳಾ ಭಜನಾ ತಂಡದವರಿಂದ ಭಜನಾ ಸಂಕೀರ್ತನೆ ನಡೆಯಿತು. 11ಕ್ಕೆ ನವಕಾಭಿಷೇಕ, 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ವಿತರಣೆ ನಡೆಯಿತು.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಯುವ ಕಲಾವಿದರಿಂದ ಯಕ್ಷ=ಗಾನ=ವೈಭವ ಪ್ರಸ್ತುತಗೊಂಡಿತು. ರವಿಶಂಕರ ಚೇನಕ್ಕೋಡು, ನಾರಾಯಣ ತುಂಗ(ಭಾಗವತಿಕೆ), ಗೋಪಾಲಕೃಷ್ಣ ನಾವಡ, ಮುರಳೀ ಮಾಧವ ಮಧೂರು(ಚೆಂಡೆ ಹಾಗೂ ಮೃದಂಗ)ದಲ್ಲಿ ಸಹಕರಿಸಿದರು. ರವಿಶಂಕರ ತುಂಗ ಬನ್ನೂರು ನಿರೂಪಕರಾಗಿ ಸಹಕರಿಸಿದರು.
ಸಂಜೆ 5 ರಿಂದ ಭಜನಾ ಸಂಕೀರ್ತನೆ, 6.30ಕ್ಕೆ ದೀಪಾರಾಧನೆ ನಡೆಯಿತು. ಬಳಿಕ 7 ರಿಂದ ಸಾಮೂಹಿಕ ಕಾರ್ತಿಕ ಪೂಜೆ, ಶ್ರೀಭೂತಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ವಿತರಣೆ ನಡೆಯಿತು. ಬಳಿಕ ಶ್ರೀವಿಷ್ಣುಮೂರ್ತಿ, ರಕ್ತೇಶ್ವರಿ ದೈವಗಳಿಗೆ ತಂಬಿಲ ಸೇವೆ, ಅನ್ನದಾನ ನಡೆಯಿತು.
ಇಂದು ಬೆಳಿಗ್ಗೆ 8ಕ್ಕೆ ಶ್ರೀವಿಷ್ಣುಮೂರ್ತಿ ದೈವ ಕೋಲದೊಂದಿಗೆ ಉತ್ಸವ ಸಮಾರೋಪಗೊಂಡಿತು.

