ಮುಳ್ಳೇರಿಯ ಕಯ್ಯಾರ ಕಿಂಞಣ್ಣ ರೈ ವಾಚನಾಲಯಕ್ಕೆ ಕೊಡುಗೆ
0
ಫೆಬ್ರವರಿ 18, 2019
ಮುಳ್ಳೇರಿಯ: ಪ್ರಸಿದ್ಧ ಕನ್ನಡ ಸಾಹಿತಿ ಕಯ್ಯಾರ ಕಿಂಞಣ್ಣ ರೈ ಅವರ ಹೆಸರಿನಲ್ಲಿ ಮುಳ್ಳೇರಿಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಾಚನಾಲಯಕ್ಕೆ ಮುಳ್ಳೇರಿಯದ ಕಾರ್ಪೋರೇಶನ್ ಬ್ಯಾಂಕ್ ಶಾಖೆಯ ವತಿಯಿಂದ 500 ಪುಸ್ತಕಗಳು ಮತ್ತು 5ಸಾವಿರ ರೂಪಾಯಿಯನ್ನು ಕೊಡುಗೆಯಾಗಿ ನೀಡಲಾಯಿತು.
ಕಯ್ಯಾರ ಕಿಂಞಣ್ಣ ಸ್ಮಾರಕ ವಾಚನಾಲಯದಲ್ಲಿ ನಡೆದ ಸಮಾರಂಭದಲ್ಲಿ ಬ್ಯಾಂಕಿನ ಪ್ರಬಂಧಕ ಬಿ.ಗುರುಪ್ರಸಾದ್ ಅವರು ವಾಚನಾಲಯದ ಕಾರ್ಯದರ್ಶಿ ಕೆ.ಕೆ.ಮೋಹನನ್ ಅವರಿಗೆ ಪುಸ್ತಕಗಳು ಮತ್ತು ಚೆಕ್ಕನ್ನು ಹಸ್ತಾಂತರಿಸಿದರು. ಸಮಾರಂಭದಲ್ಲಿ ಎ.ಕೆ.ಅಬ್ದುಲ್ ರಹಮಾನ್ ಹಾಜಿ ಅವರು ಅಧ್ಯಕ್ಷತೆ ವಹಿಸಿದ್ದರು. ಚಾಲ್ರ್ಸ್ ಕಲ್ಲಡ, ಬ್ಯಾಂಕಿನ ಗಣರಾಜ್.ಎನ್.ಎಂ, ಶಿಕ್ಷಕಿ ಸಾವಿತ್ರಿ.ಎಂ ಉಪಸ್ಥಿತರಿದ್ದರು.
ಕೆ.ಕೆ.ಮೋಹನನ್ ಸ್ವಾಗತಿಸಿದರು. ಚಂದ್ರನ್ ಮೊಟ್ಟಮ್ಮಲ್ ವಂದಿಸಿದರು.

