ಮುಳ್ಳೇರಿಯ: ಇಲ್ಲಿನ ವಿದ್ಯಾಶ್ರೀ ಶಿಕ್ಷಣ ಕೇಂದ್ರದಲ್ಲಿ ಚೈಲ್ಡ್‍ಲೈನ್ ಮಾಹಿತಿ ಶಿಬಿರ ಶನಿವಾರ ನಡೆಯಿತು.
ಚೈಲ್ಡ್‍ಲೈನ್ ಕಾಸರಗೋಡು ಘಟಕದ ಜಿಲ್ಲಾ ಸಂಯೋಜನಾ ಅಧಿಕಾರಿ ಅನೀಶ್ ಜೋಸ್ ಮತ್ತು ಉದಯ ಕುಮಾರ್ ಮಕ್ಕಳ ಸಂರಕ್ಷಣೆ ಹಾಗೂ ಪರಿಹಾರ ಮಾರ್ಗಗಳು ಎಂಬ ವಿಷಯವಾಗಿ ರಕ್ಷಕರಿಗೆ ಮಾಹಿತಿಯನ್ನು ನೀಡಿದರು. ಶಾಲಾ ಸಮಿತಿ ಅಧ್ಯಕ್ಷ ಗಣೇಶ್ ವತ್ಸ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ವೇಣುಗೋಪಾಲನ್ ನಾಯರ್ ಉಪಸ್ಥಿತರಿದ್ದರು.
ಶಿಕ್ಷಕಿ ಪುನಷ್ಯ ಸ್ವಾಗತಿಸಿದರು. ಬಾಲಸುಬ್ರಹ್ಮಣ್ಯ ಭಟ್ ಕೋಳಿಕ್ಕಜೆ ಕಾರ್ಯಕ್ರಮ ನಿರೂಪಿಸಿದರು. ಯೋಗ ಶಿಕ್ಷಕಿ ಕಾವ್ಯಶ್ರೀ ವಂದಿಸಿದರು.
