HEALTH TIPS

ಸೋಮಯಾಗ-ಧಾರ್ಮಿಕ ಸಭೆ ಸಮಾರೋಪ ಲೋಕ-ರಾಷ್ಟ್ರ ಹಿತ ಯಾಗದಿಂದ ಸಂಪ್ರಾಪತಿಗೊಳ್ಳಲಿ-ಗಣ್ಯರ ಅಭಿಮತ

ಉಪ್ಪಳ: ಭಾರತದ ಪ್ರಾಚೀನ ಆಚರಣೆಗಳ ಹಿಂದೆ ಜಗತ್ ಕಲ್ಯಾಣದ ಸಂಕಲ್ಪ ಅಡಗಿದೆ. ಆ ಕಾರಣದಿಂದ ವಿಶಾಲ, ಪ್ರಾಚೀನ ಈ ಪರಂಪರೆ ಇಷ್ಟು ಸುಧೀರ್ಘ ಕಾಲ ಬೆಳೆದುಬಂದಿದೆ. ರಾಷ್ಟ್ರವನ್ನು ಮತ್ತು ಜಗದ್ಗುರುವಾಗಿಸುವ ಕನಸಿಗೆ ಪ್ರೇರಣೆಯಾಗಿ ಮತ್ತೆ ಪ್ರಾಚೀನ ಸದಾಶಯದ ಆಚರಣೆಗಳನ್ನು ನೆನಪಿಸುವ ಚಟುವಟಿಕೆಗಳಾಗಬೇಕು. ಕೊಂಡೆವೂರು ಆಶ್ರಮದ ಮೂಲಕ ಅಂತಹ ಯತ್ನಕ್ಕೆ ತೊಡಗಿಸಿಕೊಂಡಿರುವುದು ಭರವಸೆ ಮೂಡಿಸಿದೆ ಎಂದು ಕೇಂದ್ರ ಆಯುಷ್ ಖಾತೆ ಸಚಿವ ಶ್ರೀಪಾದ ಎಸ್ಸೋ ನಾಯಕ್ ತಿಳಿಸಿದರು. ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದಲ್ಲಿ ಲೋಕಕಲ್ಯಾಣಾರ್ಥವಾಗಿ ಫೆ.18 ರಿಂದ ಹಮ್ಮಿಕೊಳ್ಳಲಾಗಿದ್ದ ಅರುಣ ಕೇತುಕ ಚಯನಪೂರ್ವಕವಾದ ವಿಶ್ವಜಿತ್ ಅತಿರಾತ್ರ ಸೋಮಯಾಗದ ಸಮಾರೋಪ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು. ದೇಶದ ಪ್ರತಿ ಮನೆಗಳಲ್ಲೂ ಪ್ರಾಚೀನ ಕಾಲದಲ್ಲಿ ಯಾಗಗಳು ನಡೆಯುತ್ತಿತ್ತು. ಇದರ ಪರಿಣಾಮ ವಿದೇಶಿ ರಾಷ್ಟ್ರಗಳು ಭರತ ಖಂಡದ ಆಧ್ಯಾತ್ಮಿಕ ಪ್ರಭೆಗೆ ಮರುಳಾಗಿದ್ದರು. ಆದರೆ ಮರೆಯುವಿಕೆಗೊಳಗಾಗಿ ವಿಸ್ಮøತಿಗೊಳಗಾಗಿರುವ ಯುವ ಸಮೂಹಕ್ಕೆ ಮತ್ತೆ ಪರಂಪರೆಯನ್ನು ಪರಿಚಯಿಸುವ, ಜಾಗತಿಕ ಹಿತದ ಕನಸುಗಳೊಂದಿಗೆ ಕೊಂಡೆವೂರಿನ ಅತಿರಾತ್ರ ಸೋಮಯಾಗ ವಿಶಿಷ್ಟವಾಗಿ ಮೂಡಿಬಂದಿದೆ ಎಂದು ಸಚಿವರು ತಿಳಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ಹಿರಿಯ ಧಾರ್ಮಿಕ ನಾಯಕ, ಕಲ್ಲಡ್ಕ ಶ್ರೀರಾಮ ವಿದ್ಯಾಲಯದ ಸಂಚಾಲಕ ಡಾ.ಪ್ರಭಾಕರ ಭಟ್ ಅವರು, ಭಾರತವು ಬಲಿಷ್ಠ ರಾಷ್ಟ್ರ.ಇಲ್ಲಿರುವಷ್ಟು ಜ್ಞಾನ-ವಿಜ್ಞಾನ ಬೇರೆಡೆ ಇಲ್ಲ. ಆದರೆ ನಮ್ಮಲ್ಲಿನ ಮಾನಸಿಕ ಹಿನ್ನಯಿಂದಾಗಿ ಹಿಂದುಳಿಯಲು ಕಾರಣವಾಯಿತುÁ್ನದರೆ ಮತ್ತೆ ರಾಷ್ಟ್ರೋನ್ನತಿಯ ಚಿಂತನೆಗಳು ಮತ್ತೆ ಪುಟಿದೇಳುತ್ತಿದ್ದು, ಪರಂಪರೆಯನ್ನು ನೆನಪಿಸುವ ಮರು ಚಿಂತನೆ ನಡೆಯುತ್ತಿದೆ. ಕೊಂಡೆವೂರು ಶ್ರೀಗಳ ಸಂಸ್ಕøತಿ ಉಳಿಸುವ ಸಂಶೋಧನೆಗಳಲ್ಲಿ ನಿರತವಾಗಿರುವುದು ಸ್ತುತ್ಯರ್ಹ ಎಂದು ತಿಳಿಸಿದರು. ಜಗತ್ತಿನಲ್ಲಿ ಸರ್ವರಿಗೂ ಒಳಿತನ್ನು ಬಯಸುವ ಪರಂಪರೆ ಹಿಂದೂ ಸಮಾಜದ್ದಾಗಿದೆ. ಸರ್ವೇಜನಾಃ ಸುಖಿನೋಭವಂತಿ ಎಂಬ ಪರಂಪರೆಯ ಹಿಂದಿರುವ ಹಿಂದೂ ಸಂಸ್ಕøತಿ ಹೇಗೆ ಕೋಮುವಾದಿಯಾಗುತ್ತದೆ ಎಂದು ಅವರು ಪ್ರಶ್ನಿಸಿದರು. ಜಗತ್ತಿಗೆ ಶಾಂತಿ ಸಮಾಧಾನ ನೀಡುವಲ್ಲಿ ಭಾರತ ರಾಷ್ಟ್ರ ಉಳಿದು ಬೆಳೆಯಬೇಕು. ಇದರಿಂದ ಧರ್ಮ ರಕ್ಷಣೆ ಸಾಧ್ಯವಾಗುತ್ತದೆ. ಸನಾತನ ಸಂಸ್ಕøತಿ ಉಳಿದರಷ್ಟೇ ಜಗತ್ತು ಉಳಿದೀತು ಎಂದು ಕಲ್ಲಡ್ಕ ತಿಳಿಸಿದರು. ಪ್ರಕೃತಿಯೊಂದಿಗೆ ಬದುಕುವ, ಪ್ರಕೃತಿಯನ್ನು ಆರಾಧಿಸಿ, ಜೀವ ಕಾರುಣ್ಯಕ್ಕೆ ಪ್ರೇರೇಪಿಸುವ ಏಕೈಕ ಧರ್ಮ ಸನಾತನ ಹಿಂದೂ ಧರ್ಮವಾಗಿದ್ದು, ಸೋಮಯಾಗದ ಹಿಂದಿನ ಪರಿಕಲ್ಪನೆ ಪರಿಸರ ಸಂರಕ್ಷಣೆಯೇ ಆಗಿದೆ. ಪರಿಸರದ ಜೊತೆಗೆ ನಮ್ಮೊಳಗಿನ ಅಂತಃಕರಣವನ್ನು ಶುದ್ದಗೊಳಿಸಲಿ ಎಂದು ಅವರು ಹಾರೈಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಚಿಕ್ಕಮಂಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಮಾತನಾಡಿ, ಪುಟ್ಟ ಗ್ರಾಮವಾದ ಕೊಂಡೆವೂರಿನ ಹೆಚ್ಚು ಶ್ರೀಮಂತವಲ್ಲದ ಸನ್ನಿಧಿಯೊಂದರಲ್ಲಿ ವಿಶ್ವ ಶಾಂತಿಗಾಗಿ ಹಮ್ಮಿಕೊಳ್ಳಲಾದ ಸೋಮಯಾಗ ನಿಜವಾಗಿಯೂ ಅತ್ಯಪೂರ್ವ ಎಂದು ತಿಳಿಸಿದರು. ಯಾವ ಸರಕಾರ ದೇಶದ ಆಡಳಿತ ಚುಕ್ಕಾಣಿ ಹಿಡಿದಿದೆ ಎನ್ನುವುದು ಗಡಿ ಕಾಯುವ ಸೈನಿಕನಿಗೆ ಮುಖ್ಯವಾಗಿರುವುದಿಲ್ಲ. ಆದರೆ ರಾಷ್ಟ್ರ ಸಂರಕ್ಷಣೆಯ ಪಣತೊಟ್ಟ ಸೈನಿಕರ ಕೈಯನ್ನು ಬಲಗೊಳಿಸುವ ಸರಕಾರಗಳು ಆಡಳಿತ ನಡೆಸಬೇಕು ಎಂದಷ್ಟೆ ಅವರು ಚಿಂತಿಸುತ್ತಾರೆ. ಈ ನಿಟ್ಟಿನಲ್ಲಿ ರಾಷ್ಟ್ರೋತ್ಥಾನದ ಹೊಸ ಅಲೆ ಸೃಷ್ಟಿಯಾಗಿರುವುದನ್ನು ನಾವು ಗುರುತಿಸಬೇಕು ಎಂದು ಸಂಸದೆ ತಿಳಿಸಿದರು. ರಾಷ್ಟ್ರದ ಸಾರ್ವಭೌಮತೆಗೆ ಧಕ್ಕೆ ತರುವ ಯತ್ನಗಳು ಹೆಚ್ಚುಕಾಲ ಬಾಳದು. ಪುಲ್ವಾಮಾ ಧಾಳಿಯಲ್ಲಿ ಹುತಾತ್ಮರಾದ ಬಲಿದಾನಿ ಸೈನಿಕರ ಆತ್ಮ ಶಾಂತಿಗೆ ಭಾರತದ ಎಲ್ಲಾ ಉಪಕ್ರಮಗಳಿಗೆ ವಿಶ್ವಮನ್ನಣೆ ಇಂದು ಕೂಡಿಬರುತ್ತಿದೆ. ದೇಶದ ಶಕ್ತಿ ಬಲಗೊಳಿಸುವ ನಿಟ್ಟಿನಲ್ಲಿ, ರಾಷ್ಟ್ರ ಸುಭಿಕ್ಷೆಗೆ ಸೋಮಯಾಗ ಪೂರ್ಣಪೂಣ್ಯ ಲಭ್ಯವಾಗುವುದು ಎಂದು ಅವರು ತಿಳಿಸಿದರು. ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ, ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿ, ಕರಿಂಜೆಯ ಮುಕ್ತಾನಂದ ಸ್ವಾಮೀಜಿ ಉಪಸ್ಥಿತರಿದ್ದು ಆಶೀರ್ವಚನಗೈದು ಹಾರೈಸಿದರು. ಕಟೀಲು ಶ್ರೀಕ್ಷೇತ್ರದ ಕಮಲಾದೇವೀ ಪ್ರಸಾದ ಆಸ್ರಣ್ಣ ಉಪಸ್ಥಿತರಿದ್ದು ಮಾತನಾಡಿ ಯಾಗದ ಹೊಗೆಯಿಂದ ಹಗೆತನ ದೂರವಾಗಲಿ. ಎಲ್ಲರ ಅಂತಃಕರಣ ಶುದ್ದಿಗೊಳ್ಳಲಿ. ಇದರಿಂದ ಎಲ್ಲಾ ಹಿತಗಳೂ ಸಿದ್ದಿಯಾಗುವುದು ಎಂದು ತಿಳಿಸಿದರು. ವಿಶ್ವಜಿತ್ ಅತಿರಾತ್ರ ಸೋಮಯಾಗ ಸಮಿತಿ ಅಧ್ಯಕ್ಷ ಕುಸುಮೋಧರ ಡಿ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೇಂದ್ರ ಆಯುಷ್ ಖಾತೆ ಸಚಿವ ಶ್ರೀಪಾದ ಎಸ್ಸೋ ನಾಯಕ್, ಕಾಸರಗೋಡು ಜಿ.ಪಂ. ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್, ಉದ್ಯಮಿಗಳಾದ ಭಾಸ್ಕರ ಶೆಟ್ಟಿ ಪುಣೆ, ರಘುನಾತ ಸೋಮಯಾಜಿ, ಪ್ರವೀಣ್ ಶೆಟ್ಟಿ ವಕ್ವಾಡಿ, ಸರ್ವೋತ್ತಮ ಶೆಟ್ಟಿ ದುಬಾಯಿ, ಯಶ್‍ಪಾಲ್ ಸುವರ್ಣ,ರೋಹಿತ್ ಶೆಟ್ಟಿ ನಗ್ರಿಗುತ್ತು, ಎನ್‍ಸಿಪಿ ಮುಖ್ಯಸ್ಥ ಸುನಿಲ್‍ಕೃಷ್ಣ ಸುತಾರ್, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ,ಯಾಗ ಸಮಿತಿ ಮಹಿಳಾ ಘಟಕದ ಡಾ.ಆಶಾಜ್ಯೋತಿ ರೈ, ಸಂಧ್ಯಾ ಜಾಧವ್, ಯಾಗ ಸ್ವಾಗತ ಸಮಿತಿ ಅಧ್ಯಕ್ಷ ಎಂ.ಬಿ.ಪುರಾಣಿಕ್, ಪ್ರಧಾನ ಕಾರ್ಯದರ್ಶಿ ಸದಾನಂದ ನಾವರ, ಕಾರ್ಯಾಧ್ಯಕ್ಷರಾದ ಡಾ.ಕೆ.ನಾರಾಯಣ ಸ್ಕ್ಯಾನ್ ಪ್ರಿಂಟರ್ಸ್, ಡಾ.ಶ್ರೀಧರ ಭಟ್ ಉಪ್ಪಳ, ಗೌರವ ಕಾರ್ಯದರ್ಶಿಗಳಾದ ಇ.ಎಸ್.ಮಹಾಬಲೇಶ್ವರ ಭಟ್ ರಷ್ಯಾ, ಕೋಶಾಧ್ಯಕ್ಷ ಶಶಿಧರ ಶೆಟ್ಟಿ ಗ್ರಾಮಚಾಡಿ ಉಪಸ್ಥಿತರಿದ್ದು ಶುಭಹಾರೈಸಿದರು. "ವಿಶ್ವಜಿತ್ ಸ್ಮøತಿ ಸಂಪದ" ಸ್ಮರಣ ಸಂಚಿಕೆಯನ್ನು ಈ ಸಂದರ್ಭ ಪ್ರಧಾನ ಸಂಪಾದಕ ಡಾ.ಅನಂತಕೃಷ್ಣ ಭಟ್ ಅವರು ಗಣ್ಯರಿಗೆ ಪುಸ್ತಕ ನೀಡುವ ಮೂಲಕ ಬಿಡುಗಡೆಗೊಳಿಸಿದರು. ಸಮಾರಂಭದಲ್ಲಿ ಕೊಂಡೆವೂರು ಶ್ರೀಗಳ ಮಾತೃಶ್ರೀ ಪದ್ಮಾವತಿ ಅಮ್ಮ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕು.ಸಂಪ್ರೀತಾ ಮಯ್ಯ ಪ್ರಾರ್ಥನಾಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಯಾಗ ಸಮಿತಿ ಕಾರ್ಯಾಧ್ಯಕ್ಷ ಮೋನಪ್ಪ ಭಂಡಾರಿ ಸ್ವಾಗತಿಸಿ, ರಾಮಚಂದ್ರ ಸಿ. ವಂದಿಸಿದರು. ನ್ಯಾಯವಾದಿ ಗಂಗಾಧರ ಕೊಂಡೆವೂರು ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries