ಶುಚಿತ್ವ ಮಿಗವ್ ಜಿಲ್ಲಾ ಸಂಗಮ ಕಾರ್ಯಕ್ರಮ
0
ಫೆಬ್ರವರಿ 16, 2019
ಕಾಸರಗೋಡು: ಹರಿತ ಕೇರಳಂ ಮಿಷನ್ ವತಿಯಿಂದ "ಶುಚಿತ್ವ ಮಿಗವ್ ಜಿಲ್ಲಾ ಸಂಗಮ" ಕಾರ್ಯಕ್ರಮ ಶುಕ್ರವಾರ ನಡೆಯಿತು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಮಾರಂಭವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಉದ್ಘಾಟಿಸಿದರು. ಪರಪ್ಪ ಬ್ಲಾಕ್ ಪಂಚಾಯತ್ ಅಧ್ಯಕ್ಷ ಪಿ.ರಾಜನ್ ಅಧ್ಯಕ್ಷತೆ ವಹಿಸಿದ್ದರು. ಹರಿತಕೇರಳಂ ಮಿಷನ್ ರಾಜ್ಯ ಸಲಹೆಗಾರ ಪಿ.ಅಜಯಕುಮಾರ್ ಮುಖ್ಯ ಅತಿಥಿಯಾಗಿದ್ದರು. ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್ ತ್ಯಾಜ್ಯ ಪರಿಷ್ಕರಣೆ ಚಟುವಟಿಕೆಗಳ ಮಾಹಿತಿ ನೀಡಿದರು. ಅತ್ಯುತ್ತಮಚಟುವಟಕೆ ನಡೆಸಿದ ಶಾಲೆಗಳಿಗೆ, ಸಂಸ್ಥೆಗಳಿಗೆ ಅಭಿನಂದನೆ ನಡೆಯಿತು. ಬ್ಲಾಕ್ ಪಂಚಾಯತ್ ಅಧ್ಯಕ್ಷ ವಿ.ಪಿ.ಜಾನಕಿ, ಕಾರಡ್ಕ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಓಮನಾ ರಾಮಚಂದ್ರನ್, ಪುಲ್ಲೂರು-ಪೆರಿಯ ಗ್ರಾಮಪಂಚಾಯತ್ ಅಧ್ಯಕ್ಷೆ ಶಾರದಾ ಎಸ್.ನಾಯರ್, ಚೆರುವತ್ತೂರು ಗ್ರಾಮಪಂಚಾಯತ್ ಅಧ್ಯಕ್ಷ ಮಾಧವನ್ ಮಣಿಯರ, ಬೇಡಡ್ಕ ಗ್ರಾಮಪಂಚಾಯತ್ ಅಧ್ಯಕ್ಷ ನ್ಯಾಯವಾದಿ ಸಿ. ರಾಮಚಂದ್ರನ್,ಜಿಲ್ಲಾ ಶುಚಿತ್ವ ಮಿಷನ್ ಜಿಲ್ಲಾ ಸಂಚಾಲಕ ಸಿ.ರಾಧಾಕೃಷ್ಣನ್,ಜಿಲ್ಲಾ ಸಹಾಯಕ ಯೋಜನಾ ಅಧಿಕಾರಿ ಸಿನೋಜ್ ಮೇಪ್ಪಡಿಯತ್,ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

