ಐಲ ಬೋವಿಸ್ ಮೀನುಗಾರರ ಸೊಸೈಟಿ ವತಿಯಿಂದ ಸಂಭ್ರಮದ ಶತಮಾನೋತ್ಸವ ಆಚರಣೆ
0
ಫೆಬ್ರವರಿ 24, 2019
ಉಪ್ಪಳ: ಐಲ ಬೋವಿಸ್ ಮೀನುಗಾರರ ಅಭಿವೃದ್ದಿ ಮತ್ತು ಕ್ಷೇಮ ಸಹಕಾರ ಸಂಘ ನೂರು ವರ್ಷವನ್ನು ಪೂರೈಸಿದ ಹಿನ್ನೆಲೆಯಲ್ಲಿ ಬಾನುವರದಂದು ಮಂಗಲ್ಪಾಡಿ ಶ್ರೀ ಶಾರದಾ ಬೋವಿ ಶಾಲೆಯಲ್ಲಿ ಸಂಘದ ವತಿಯಿಂದ ಸಂಭ್ರಮದ ಶತಮಾನೋತ್ಸವವನ್ನು ಆಚರಿಸಲಾಯಿತು.
1999 ರಿಂದ ಸೇವೆ ಸಲ್ಲಿಸಿ ನಿಧನರಾದ ಸಂಘದ ಸದಸ್ಯರಿಗೆ ಹಾಗೂ ಪುಲ್ವಾಮದಲ್ಲಿ ಭಯೋತ್ಪಾಧ ದಾಳಿಯಲ್ಲಿ ಹುತಾತ್ಮತರಾದ ವೀರ ಸೈನಿಕರಿಗೆ ಒಂದು ನಿಮಿಷದ ಮೌನ ಪ್ರಾರ್ಥಣೆಯ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಂಘದ ಅಧ್ಯಕ್ಷ ಶ್ರೀಧರ ಐಲ್ ರವರ ಘನ ಅಧ್ಯಕ್ಷತೆಯಲ್ಲಿ ನಡೆದ ಶತಮಾನೋತ್ಸವ ಸಂಭ್ರಮವನ್ನು ಫಿಶರೀಶ್ ಅಸಿಸ್ಟಂಟ್ ಡೈರೆಕ್ಟರ್ ಕೆ ಕೆ ಸತೀಶನ್ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಬಳಿಕ ಸಂಘದ ಹಿರಿಯ ಸದಸ್ಯರಿಗೆ ಹಾಗೂ ಮಾಜಿ ಅಧ್ಯಕ್ಷರುಗಳನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಬಳಿಕ ಸೊಸೈಟಿ ಬ್ಯಾಂಕಿನಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳಿಗೆ ಹಾಗೂ ವರ್ತಮಾನ ನಿರ್ಧೇಶಕರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಬಳಿಕ ಸವಿನೆನಪಿಗಾಗಿ ಐಲ ಶ್ರೀ ಶಾರದಾ ಬೋವಿ ಶಾಲೆಯ ಒಂದು ಕೊಠಡಿ ನಿರ್ಮಾಣಕ್ಕೆ ಸಂಘದ ವತಿಯಿಂದ ಎರಡು ಲಕ್ಷ ರೂ. ನ ಚೆಕ್ ವಿತರಿಸಲಾಯಿತು. ಈ ಸಂದರ್ಭ ವೇದಿಕೆಯಲ್ಲಿ ಸಹಕಾರ ಭಾರತಿ ರಾಜ್ಯ ಸಮಿತಿ ಸದಸ್ಯ ಐತಪ್ಪ ಮೌವ್ವಾರ್, ಫಿಷರೀಶ್ ಅಧಿಕಾರಿ ವೇಣುಗೋಪಾಲ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಮಾಧವ ಕಾವುಗೋಳಿ, ಸಿ ಎಸ್ ಕೃಷ್ಣಪ್ಪ, ಕರುಣಾಕರ ಬೆಲ್ಚಪ್ಪಾಡ, ವಿನು ಪೂಜಾರಿ, ಮುಕುಂದನ್, ಶಿವರಾಂ ಬಂಗೇರ ಮೊದಲಾದವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಬಳಿಕ ವೇದಿಕೆಯಲ್ಲಿ ಶ್ರೀ ರಾಮ ಎ ಯು ಪಿ ಶಾಲೆ ಕುಬಣೂರು ಇದರ ವಿದ್ಯಾರ್ಥಿಗಳಿಂದ ಯಕ್ಷಗಾನ ಬಯಲಾಟ ನಡೆಯಿತು ಸರಸ್ವತಿ ಟೀಚರ್ ಸ್ವಾಗತಿಸಿ ನಿಶಾ ರೇಖಾ ವಂದಿಸಿದರು.

