ಗಿಳಿವಿಂಡು ನೇತೃತ್ವದಲ್ಲಿ ಸ್ನಾತಕ ಪ್ರತಿಬೋತ್ತೇಜನ ಕಾರ್ಯಕ್ರಮ
0
ಫೆಬ್ರವರಿ 14, 2019
ಮಂಜೇಶ್ವರ: ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಹಾಗೂ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜು ಮಂಜೇಶ್ವರ ಇಲ್ಲಿನ ಕನ್ನಡ ವಿದ್ಯಾರ್ಥಿಗಳ ಸಾಹಿತ್ಯಕ ಸಾಂಸ್ಕೃತಿಕ ವೇದಿಕೆಯಾದ "ಗಿಳಿವಿಂಡು"ವಿನ ನೇತೃತ್ವದಲ್ಲಿ " ಸ್ನಾತಕ ಪ್ರತಿಭೋತ್ತೇಜನ"ಎಂಬ ಕಾರ್ಯಕ್ರಮವು ಇತ್ತೀಚೆಗೆ ಮಂಜೇಶ್ವರದ ಕವಿನಿವಾಸ "ಗಿಳಿವಿಂಡು"ವಿನಲ್ಲಿ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ನಡೆದ ಸಭಾಕಾರ್ಯಕ್ರಮದಲ್ಲಿ ಗೋವಿಂದ ಪೈ ಸ್ಮಾರಕ ಕಾಲೇಜಿನ ಪ್ರಾಂಶುಪಾಲ ಡಾ.ಸುನಿಲ್ ಜೋನ್ ಅಧ್ಯಕ್ಷತೆ ವಹಿಸಿದ್ದರು. ಗಿಳಿವಿಂಡು ನಿವಾಸದ ಆಡಳಿತಾಧಿಕಾರಿ ಡಾ.ಕಮಲಾಕ್ಷ ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ರಾಷ್ಟ್ರಕವಿ ಗೋವಿಂದ ಪೈ ಟ್ರಸ್ಟ್‍ನ ಕೋಶಾಧಿಕಾರಿ ಬಿ.ವಿ. ಕಕ್ಕಿಲ್ಲಾಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ವಿಶೇಷ ಆಮಂತ್ರಿತರಾದ 'ಕುಂಡಲಿನಿ ಯೋಗಕೇಂದ್ರ 'ಮಂಜೇಶ್ವರ ಇಲ್ಲಿನ ಪ್ರಚಾರ್ಯರಾದ ಪ್ರೊ.ವಾಸುದೇವ ಅವರು ಕಾರ್ಯಕ್ರಮದ ಕುರಿತು ಹಿತನುಡಿಗಳನ್ನಾಡಿದರು.ಗೋವಿಂದ ಪೈ ಸ್ಮಾರಕ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಅಮಿತ ಹಾಗೂ ಇತಿಹಾಸ ವಿಭಾಗದ ಉಪನ್ಯಾಸಕ ಡಾ.ಸಲೀಂ ಶುಭಹಾರೈಸಿದರು.ಗಿಳಿವಿಂಡು ಕನ್ನಡ ವಿದ್ಯಾರ್ಥಿಗಳ ಸಾಹಿತ್ಯಕ ಸಾಂಸ್ಕೃತಿಕ ವೇದಿಕೆಯ ಮಾರ್ಗದರ್ಶಕ ಲಕ್ಷ್ಮೀ ವಂದಿಸಿದರು.
ಬಳಿಕ ಗೋವಿಂದ ಪೈ ಸ್ಮಾರಕ ಕಾಲೇಜಿನ ಗಿಳಿವಿಂಡು ವೆದಿಕೆಯ ವಿದ್ಯಾರ್ಥಿಗಳಿಂದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ತೃತೀಯ ಪದವಿ ಕನ್ನಡದ ಕೃಷ್ಣ ಅವರು ಪ್ರಸ್ತುತಪಡಿಸಿದ " ಕೊರಗತನಿಯ"ಭೂತದ 'ಪಾಡ್ದನವು' ಮೆಚ್ಚುಗೆಗೆ ಪಾತ್ರವಾಯಿತು. ಗಿಳಿವಿಂಡು ಸದಸ್ಯೆಯರಾದ ನವ್ಯ ಹಾಗೂ ಕೀರ್ತನ ಹೇರಳಾ ಅವರ ಗಾಯನ ಕಾರ್ಯಕ್ರಮಕ್ಕೆ ಹೊಸದೊಂದು ಮೆರುಗನ್ನು ನೀಡಿತು.

