HEALTH TIPS

ವಿವಿ ಕಲೋತ್ಸವದಲ್ಲಿ ರಾಜಪುರಂ ಕಾಲೇಜು ತಂಡ ಪ್ರಥಮ-ತೀರ್ಪು ವಿವಾದ- ಆರೋಪ

ಕಾಸರಗೋಡು: ಕಣ್ಣೂರು ವಿವಿ ಮಟ್ಟದ ಕಾಲೇಜುಗಳ ಪ್ರಸ್ತುತ ವರ್ಷದ ಕಲೋತ್ಸವವು ಪಡನ್ನಕ್ಕಾಡ್ ನೆಹರೂ ಕಾಲೇಜಿನಲ್ಲಿ ನಡೆಯಿತು. ಶನಿವಾರ ರಾತ್ರಿ ಕನ್ನಡ ನಾಟಕ ಸ್ಪರ್ಧೆ ನಡೆಯಿತು. ಒಟ್ಟು 5 ಕಾಲೇಜು ತಂಡಗಳು ಪ್ರದರ್ಶಿಸಿ ನಾಟಕಗಳಲ್ಲಿ ರಾಜಪುರಂ ಸೈಂಟ್ ಫಯರ್ಸ್ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶನ ನೀಡಿದ "ಗೆರಸೆ" ನಾಟಕ ಪ್ರಥಮ ಸ್ಥಾನ ಹಾಗೂ ಉತ್ತಮ ನಟಿಗಿರುವ ಪ್ರಶಸ್ತಿಯನ್ನೂ ಗಿಟ್ಟಿಸುವಲ್ಲಿ ಸಪಲವಾಯಿತು. ವಿನೀಶ್ ಕೋಝಿಕ್ಕೋಡ್ ಅವರ ಕಥೆಯನ್ನಾದರಿಸಿ ನಿರ್ಮಿಸಿದ ನಾಟಕಕ್ಕೆ ಪ್ರವೀಣ್ ಕಾಡಗಂ ನಿರ್ದೇಶನ ನೀಡಿದ್ದರು. ಸ್ಕೋಲ್ ಓಫ್ ಡ್ರಾಮಾದ ಸುಫೀನ್ ಬೆಳಕಿನಲ್ಲಿ ಸಹಕರಿಸಿದ್ದರು. ಸನಲ್ ಪಾಡಿಕ್ಕಾನ ಹಾಗೂ ಉದಯ ಕುಮಡಂಗುಳಿ ಸಂಗೀತ ನೀಡಿದ್ದರು. ವಿದ್ಯಾರ್ಥಿಗಳಾದ ಲಾವಣ್ಯ ಬಾಲಕೃಷ್ಣ ಕೆ, ಅಮೃತಾ ಸುಕುಮಾರನ್, ನವೀನ್ ನಾರಾಯಣ್, ಅಮೃತ್ ಸ್ವರೂಪ್, ಪ್ರಜಿನ್ ಗೋಪಿ, ಅಶ್ವಿನ್ ಅಜಿತ್, ಅರ್ಚನ, ದಿವ್ಯಾ, ರಿಶಿತಾ ಪಾತ್ರಗಳನ್ನು ನಿರ್ವಹಿಸಿದರು. ಪೀಪಲ್ಸ್ ಕಾಲೇಜು ಮುನ್ನಾಡ್ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ಸ್ವಾತಂತ್ಯ್ರ ನಾಟಕ ದ್ವಿತೀಯ ಸ್ಥಾನ ಪಡೆಯಿತು. ವಿನು ಬೋವಿಕ್ಕಾನ ಕಥೆ ಹಾಗೂ ನಿರ್ದೇಶನದಲ್ಲಿ ಸಹಕರಿಸಿದ್ದರು. ಕಾಸರಗೋಡು ಸರಕಾರಿ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ಜ್ವಾಲಾ ಕಾಲಂದುಗೆ ನಾಟಕ ತೃತೀಯ ಸ್ಥಾನ ಪಡೆಯಿತು. ಸದಾಶಿವ ಮಾಸ್ತರ್ ಪೊಯ್ಯೆ ನಿರ್ದೇಶನ ನೀಡಿದ್ದರು. ತೀರ್ಪಿನ ವಿರುದ್ದ ಅಸಮಧಾನ: ಪ್ರದರ್ಶಿಸಲ್ಪಟ್ಟ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವತೀಯ ಸ್ಥಾನ ಪಡೆದ ನಾಟಕಗಳನ್ನು ಮಲೆಯಾಳ ವಿದ್ಯಾರ್ಥಿಗಳು ಕನ್ನಡದಲ್ಲಿ ಪ್ರದರ್ಶಿಸಿದ್ದರು. ತೃತೀಯ ಸ್ಥಾನ ಪಡೆದ ಕಾಸರಗೋಡು ಸರಕಾರಿ ಕಾಲೇಜಿನ ನಾಟಕ ತಂಡ ಈ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದು, ತೀರ್ಪುಗಾರರು ಕನ್ನಡದ ಅವಗಣನೆ ಮಾಡಿದ್ದಾರೆ. ಉಚ್ಚಾರ ದೋಷಗಳಿದ್ದ ಮಲೆಯಾಳಂ ಭಾಷಾ ವಿದ್ಯಾರ್ಥಿಗಳು ಪ್ರದರ್ಶಿಸಿದ ಕನ್ನಡ ನಾಟಕಗಳನ್ನು ಪ್ರಥಮ ಹಾಗೂ ದ್ವಿತೀಯ ಅಂಕಗಳಿಂದ ಆಯ್ಕೆ ಮಾಡಿರುವುದು ಸರಿಯಲ್ಲ ಎಂದು ಅವರು ದುರಿದ್ದಾರೆ. ಕಾಲೇಜಿನ ಕನ್ನಡ ಪರ ಸಾಹಿತ್ಯ ಸಾಂಸ್ಕøತಿಕ ತಂಡವಾದ ಸ್ನೇಹರಂಗವೂ ತೀರ್ಪುಗಾರರ ಕ್ರಮವನ್ನು ಟೀಕಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries