ವರ್ಕಾಡಿ ಸಾರ್ವಜನಿಕ ಸ್ಮಶಾನ ಲೋಕಾರ್ಪಣೆ
0
ಫೆಬ್ರವರಿ 14, 2019
ಮಂಜೇಶ್ವರ: ವರ್ಕಾಡಿ ಗ್ರಾಮ ಪಂಚಾಯತಿ ಮುರತ್ತಣೆಯಲ್ಲಿ ನಿರ್ಮಿಸಲಾದ ಸಾರ್ವಜನಿಕ ಸ್ಮಶಾನ ಗುರುವಾರ ಲೋಕಾರ್ಪಣೆಗೊಂಡಿತು.
ಗ್ರಾಮ ಪಂಚಾಯತಿಯ 2017-18 ನೇ ವಾರ್ಷಿಕ ಯೋಜನೆಯಲ್ಲಿ ಅಳವಡಿಸಿ ಮಂಜೇಶ್ವರ ಬ್ಲಾಕ್ ಪಂಚಾಯತಿ ಸಹಯೋಗದೊಂದಿಗೆ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಸ್ಮಶಾನ ನಿರ್ಮಿಸಲಾಗಿದೆ.
ವರ್ಕಾಡಿ ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ಮಜೀದ್ ಬಿ.ಎ. ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಸ್ಮಶಾನವನ್ನು ಲೋಕಾರ್ಪಣೆಗೈದರು. ವರ್ಕಾಡಿ ಪಂ. ಸಹಾಯಕ ಅಭಿಯಂತರ ತಿಮ್ಮ ಕುಡಿಯ ಕಾಮಗಾರಿಯ ವರದಿಯನ್ನು ವಾಚಿಸಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಮಂಜೇಶ್ವರ ಬ್ಲಾಕ್ ಪಂ. ಉಪಾಧ್ಯಕ್ಷೆ ಮಮತಾ ದಿವಾಕರ್, ಸುನೀತ ಡಿ' ಸೋಜ, ಫಾತಿಮತ್ ಝುಹರ, ಆಶಾಲತ, ಯು.ಸದಾಶಿವ, ರಹ್ಮತ್ ರಜಕ್, ಜೆಸಿಂತ ಡಿ'ಸೋಜ, ವರ್ಕಾಡಿ ಗ್ರಾ.ಪಂ. ಮಾಜೀ ಅಧ್ಯಕ್ಷ ದೇವಪ್ಪ ಮಾಸ್ತರ್ ಸಹಿತ ಹಲವಾರು ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು. ತುಳಸಿ ಕುಮಾರಿ ಕೆ. ಸ್ವಾಗತಿಸಿ, ರಾಜೇಶ್ವರಿ ಬಿ. ವಂದಿಸಿದರು.

