ದಮ್ಮಾಮ್‍ನಲ್ಲಿ ಉದ್ಯಾವರ ನಿವಾಸಿಗಳಿಂದ `ಗೌಜಿ ಗಮ್ಮತ್'
0
ಫೆಬ್ರವರಿ 14, 2019
ಮಂಜೇಶ್ವರ: ಅನಿವಾಸಿ ಭಾರತೀಯರ ಸಂಘಟನೆಯಾದ ಉದ್ಯಾವರ ಇಸ್ಲಾಮಿಕ್ ಎಜ್ಯುಕೇಶನ್ ಓರ್ಗನೆಶೇಷನ್ ದಮ್ಮಾಮ್ ಸಂಘಟನೆಯ ವತಿಯಿಂದ ಸೌದಿ ಅರೇಬಿಯಾದ ದಮ್ಮಾಮ್‍ನಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ `ಗೌಜಿ ಗಮ್ಮತ್ತು' ಉದ್ಯಾವರ ನಿವಾಸಿಗಳ ಕುಟುಂಬ ಸಮ್ಮಿಲನದಲ್ಲಿ ಸಂಘಟನೆಯ ಸ್ಥಾಪಕಾಧ್ಯಕ್ಷ ಹಾಜಿ ಅಬೂಬಕ್ಕರ್ ಮಾಹಿನ್ ರವರು ಧ್ವಜಾರೋಹಣಗೈದು ಚಾಲನೆ ನೀಡಿದರು.
ಬಳಿಕ ಮೊಹಮ್ಮದ್ ಹನೀಫ್ ಕಜ ಅವರ ಅಧ್ಯಕ್ಷತೆಯಲ್ಲಿ ನಡೆದ ಕುಟುಂಬ ಸಮ್ಮಿಲನದ ಸಭಾ ಕಾರ್ಯಕ್ರಮವನ್ನು ಉದ್ಯಮಿ ಎಂ.ಪಿ.ಇಸ್ಮಾಯಿಲ್ ತೂಮಿನಾಡು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಮಂಜೇಶ್ವರ ಅನಿವಾಸಿ ಒಕ್ಕೂಟದ ಅಧ್ಯಕ್ಷ ಮುನವ್ವರ್ ಆಹ್ಮದ್, ಸೌದಿ ಅರೇಬಿಯಾದ ಕೆ.ಎಂ.ಸಿ.ಸಿ. ಮಂಜೇಶ್ವರ ವಲಯಾಧ್ಯಕ್ಷ ಬಶೀರ್ ಮದಕ, ಉದ್ಯಮಿಗಳಾದ ಅಮೀರ್ ಅಬ್ಬಾಸ್, ಖಾದರ್ ಸೂಫಿ, ಸಮನ್ಸ್ ಅಧ್ಯಕ್ಷ ಶೇಖ್ ಬೇಕೂರು, ಎಲ್.ಪಿ.ಅಧ್ಯಕ್ಷ ಶಮೀರ್ ಹೊಸಂಗಡಿ, ನಿಝಾರ್ ಬಾತಿನ್, ಬಶೀರ್, ಖಾದರ್ ಶಮೀರ್ ಕರೋಡ, ರಾಝಿಕ್, ಆಸಿಫ್ ಕೆ.ಕೆ, ನೌಶಾದ್, ಆಸಿಫ್, ನಿಝಾರ್ ಗುಡ್ಡ ಮೊದಲಾದವರು ಉಪಸ್ಥಿತರಿದ್ದರು.
ಸಮಾಜ ಸೇವೆಯಲ್ಲಿ ಸಕ್ರಿಯರಾಗಿರುವ ಉದ್ಯಾವರ ನಿವಾಸಿ ಹಾಗೂ ಸೌದಿ ಅರೇಬಿಯಾದ ಉದ್ಯಮಿ ಅಬ್ದುಲ್ ಲತೀಫ್ ಬಾಬಾ ಅವರನ್ನು ಸಮ್ಮಾನಿಸಲಾಯಿತು.
ಬಳಿಕ ನಡೆದ ಕುಟುಂಬ ಕ್ರೀಡೆಯಲ್ಲಿ ಕ್ರಿಕೆಟ್, ಫುಟ್ಬಾಲ್, ಹಗ್ಗ ಜಗ್ಗಾಟ, ಸೇರಿದಂತೆ ವಿವಿಧ ಕ್ರೀಡೆಗಳು, ಅದೇ ರೀತಿ ಮಹಿಳೆಯರಿಗಾಗಿ ಮದರಂಗಿ ಹಚ್ಚುವ ಸ್ಪರ್ಧೆ ಹಾಗೂ ಹಗ್ಗ ಜಗ್ಗಾಟ ನಡೆಯಿತು. ಕುಟುಂಬ ಸಮ್ಮಿಲನದ ಮೈದಾನದಲ್ಲಿ ಬೆಂಡಿ, ಎಂಜಿ ಮಿಠಾಯಿ, ಬಲೂನ್, ಚುಕ್ಕಿ, ಪೆÇೀಡಿ, ಬಾಳೆಹಣ್ಣುಗಳ ಗೂಡಂಗಡಿಗಳು ಎಲ್ಲರ ಮನ ಸೆಳೆದವು. ಹಾರಿಸ್ ಕಜೆ ಸ್ವಾಗತಿಸಿ, ನಝೀರ್ ಆಹ್ಮದ್ ಶಾಫಿ ವಂದಿಸಿದರು.

