ಆದೂರು ಶಾಲೆಯಲ್ಲಿ ಗಮನ ಸೆಳೆದ ಕಲಿಕೋತ್ಸವ
0
ಫೆಬ್ರವರಿ 14, 2019
ಮುಳ್ಳೇರಿಯ: ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞದ ಅಂಗವಾಗಿ ಅಕಾಡೆಮಿಕ್ ಮಾಸ್ಟರ್ ಪ್ಲೇನ್‍ನಲ್ಲಿ ಉಲ್ಲೇಖಿಸಿದಂತೆ ಜ್ಯಾರಿಗೊಳಿಸಲಾದ ವಿವಿಧ ಕಲಿಕಾ ಚಟುವಟಿಕೆಗಳ ಕಲಿಕೋತ್ಸವ ಆದೂರು ಸರಕಾರಿ ಹೈಯರ್ ಸೆಕೆಂಡರೀ ಶಾಲೆಯಲ್ಲಿ ಗುರುವಾರ ನಡೆಯಿತು.
ಶಾಲೆಯಲ್ಲಿ ಬೆಳಿಗ್ಗೆ ನಡೆದÀ ಸಮಾರಂಭದಲ್ಲಿ ಕಾರಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಸೂಯ ರೈ ಉದ್ಘಾಟಿಸಿದರು. ಸಂಘಟನಾ ಸಮಿತಿ ಅಧ್ಯಕ್ಷೆ ತಸ್ನಿ ಹಮೀದ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ರಾಮಣ್ಣ.ಡಿ ಪ್ರಾಸ್ತಾವಿಕ ಭಾಷಣ ಮಾಡಿದÀರು. ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶಾನವಾಸ್ ಪಾದೂರು, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರಡ್ಕ ಬ್ಲಾಕ್ ಪಂಚಾಯಿತಿ ಸದಸ್ಯ ವಾರಿಜಾಕ್ಷನ್, ಪ್ರಭಾರ ಪ್ರಾಂಶುಪಾಲ ರಂಜಿತ್.ಕೆ.ಪಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಮುಹಮ್ಮದ್ ಹನೀಫ, ಮಾತೃಸಂಘದ ಅಧ್ಯಕ್ಷೆ ಬೀಫಾತಿಮ, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಎ.ಟಿ.ಅಬೂಬಕರ್, ಇಬ್ರಾಹಿಂ.ಎಂ.ಎ, ಎ.ಕೆ.ಅಬ್ದುಲ್ ರಹಿಮಾನ್ ಹಾಜಿ, ರಘುನಾಥ ಶೆಟ್ಟಿ, ಅಶ್ರಫ್ ಮೌಲವಿ, ಹಾಜಿರಾ, ಫೌಸಿಯಾ, ಹಿರಿಯ ಶಿಕ್ಷಕಿ ಸರಸ್ವತಿ.ಕೆ ಉಪಸ್ಥಿತರಿದ್ದರು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮುಹಮ್ಮದ್ ಪಟ್ಟಾಂಗ್ ಸ್ವಾಗತಿಸಿ, ಶಾಲಾ ನೌಕರ ಸಂಘದ ಕಾರ್ಯದರ್ಶಿ ಯೂಸಫ್.ಕೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಬಳಿಕ ಒಂದರಿಂದ ಏಳನೇ ತರಗತಿಯ ವಿದ್ಯಾರ್ಥಿಗಳ ತರಗತಿಯ ಹಿರಿಮೆಯ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಾಯಿತು.

