ಬೆದ್ರಂಪಳ್ಳ: ಶ್ರೀಗಣೇಶ ಭಜನ ಮಂದಿರ ಲೋಕಾರ್ಪಣೆ-ಶ್ರೀ ದೇವರ ಛಾಯಾಚಿತ್ರ ಪುನರ್ ಪ್ರತಿಷ್ಠೆ
0
ಫೆಬ್ರವರಿ 14, 2019
ಪೆರ್ಲ:ಬೆದ್ರಂಪಳ್ಳ ಗಣೇಶ್ ನಗರ ಶ್ರೀಗಣೇಶ ಭಜನಾ ಮಂಡಳಿಯ ನೂತನ ಭಜನಾ ಮಂದಿರ ಗುರುವಾರ ಬೆಳಿಗ್ಗೆ ಲೋಕಾರ್ಪಣೆಗೊಂಡಿತು.
ಬ್ರಹ್ಮ ಶ್ರೀ ರವೀಶ ತಂತ್ರಿ ಕುಂಟಾರು ಅವರ ನೇತೃತ್ವ ಹಾಗೂ ಶ್ರೀಧಾಮ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ನೂತನ ಮಂದಿರದಲ್ಲಿ ಶ್ರೀದೇವರ ಛಾಯಾಚಿತ್ರ ಪ್ರತಿಷ್ಠಾಪನೆ ನಡೆಯಿತು.
ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ, ಅಧ್ಯಕ್ಷ ನಾರಾಯಣ ಆಳ್ವ ವೈ., ಪ್ರಧಾನ ಕಾರ್ಯದರ್ಶಿ ಶ್ರೀಧರ ನಾಯಕ್ ಕುಕ್ಕಿಲ, ಸ್ಥಾಪಕ ಸದಸ್ಯರಾದ ಜಗನ್ನಾಥ ಆಳ್ವ ವೈ., ಸುಬ್ಬ ಪಾಟಾಳಿ ಎನ್., ಪುನರ್ ಪ್ರತಿಷ್ಠಾ ಸಮಿತಿ ಅಧ್ಯಕ್ಷ ಸೋಮಶೇಖರ್ ಜೆ.ಎಸ್., ರವೀಂದ್ರನಾಥ ನಾಯಕ್ ಶೇಣಿ, ಭಜನಾ ಮಂದಿರ ಸಮಿತಿ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ಬೆಳಿಗ್ಗೆ ಗಣಪತಿ ಹೋಮ, ಅಥರ್ವ ಶೀರ್ಷ ಹೋಮ ನಡೆಯಿತು.ಶ್ರೀ ಮೋಹನದಾಸ ಸ್ವಾಮೀಜಿ ಅವರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ಮಂದಿರ ಲೋಕಾರ್ಪಣೆ ಬಳಿಕ ಪರಮ ಪೂಜ್ಯ ಸ್ವಾಮೀಜಿ ಅವರು ಭಜನಾ ಸಂಕೀರ್ತನೆಗೆ ಚಾಲನೆ ನೀಡಿದರು. ದಾಸ ಸಂಕೀರ್ತನೆಗಾರ ರಾಮಕೃಷ್ಣ ಕಾಟುಕುಕ್ಕೆ ಬಳಗ ಹಾಗೂ ವಿವಿಧ ತಂಡಗಳಿಂದ ಭಜನಾ ಸಂಕೀರ್ತಧನೆ, ನಿತ್ಯ ನೈಮಿತ್ಯಾದಿಗಳ ನಿರ್ಣಯ, ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಸಂಜೆ ಮಂಗಳ ಭಜನೆ, ಮಹಾ ಪೂಜೆ, ಪ್ರಸಾದ ವಿತರಣೆ ಬಳಿಕ ಸ್ಥಳೀಯ ಮಕ್ಕಳ 'ಸಾಂಸ್ಕೃತಿಕ ಸಂಜೆ' ಕಾರ್ಯಕ್ರಮ ನಡೆಯಿತು.

