HEALTH TIPS

ಮಹಾಜನದಲ್ಲಿ ಕಲಿಕೋತ್ಸವ- ಕಲಿಕೆಯ ಸಾಧನೆಗಳನ್ನು ಪ್ರಕಟಿಸಲು ಕಲಿಕೋತ್ಸವ ಸಹಕಾರಿಯಾಗಲಿ- ಡಿ. ಶಂಕರ

ಬದಿಯಡ್ಕ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಹಲವಾರು ಹೊಸ ವಿಚಾರಗಳನ್ನು ಕಲಿತಿರುತ್ತಾರೆ. ವಿದ್ಯಾರ್ಥಿಗಳ ಸವಾರ್ಂಗೀಣ ವಿಕಾಸಕ್ಕೆ ಈ ಚಟುವಟಿಕೆಗಳು ಸಹಕಾರಿಯಾಗುತ್ತವೆ. ಭವಿಷ್ಯದಲ್ಲಿ ಸಮಾಜದ ಹಲವು ರಂಗಗಳಲ್ಲಿ ಮಿಂಚಲಿರುವ ಈ ಮಕ್ಕಳಿಗೆ ಶಾಲೆಯಲ್ಲಿ ಜರಗುವ ಹಲವು ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ. ಕಲೆ, ಕ್ರೀಡೆ, ವೃತ್ತಿಶಿಕ್ಷಣ ಇತ್ಯಾದಿ ರಂಗಗಳಲ್ಲಿ ಹೆಚ್ಚಿನ ತರಬೇತಿ ನೀಡುವ ಶಿಕ್ಷಣ ವ್ಯವಸ್ಥೆ ಕೇರಳದಲ್ಲಿ ಇರುವುದರಿಂದ ಮಕ್ಕಳು ಬಹುಮುಖಿಯಾದ ವಿಕಾಸವನ್ನು ಅವರ ಜೀವನದಲ್ಲಿ ಕಂಡುಕೊಳ್ಳುತ್ತಿದ್ದಾರೆ. ಈ ವಿದ್ಯಾರ್ಥಿಗಳ ಕಲಿಕೆಯ ಸಾಧನೆಗಳನ್ನು ಪ್ರದರ್ಶಿಸುವ ವೇದಿಕೆಯಾಗಿ ಕಲಿಕೋತ್ಸವ ಮೂಡಿಬಂದಿದೆ ಎಂದು ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಡಿ.ಶಂಕರ ಅಭಿಪ್ರಾಯಪಟ್ಟರು. ಅವರು ಬುಧವಾರ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ ಕಲಿಕೋತ್ಸವ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ, ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಸ್.ನಾರಾಯಣ, ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ, ಬ್ಲಾಕ್ ಸಂಪನ್ಮೂಲ ಕೇಂದ್ರದ (ಬಿ.ಆರ್.ಸಿ) ಸಂಯೋಜಕಿ ಮಮತಾ.ಪಿ ಶುಭಹಾರೈಸಿದರು. ಅಧ್ಯಾಪಕರಾದ ಮಾಲತಿ.ಪಿ, ಜ್ಯೋತಿಲಕ್ಷ್ಮಿ.ಎಸ್, ಅವಿನಾಶ ಕಾರಂತ.ಎಂ, ಪೂರ್ಣಿಮ.ಟಿ, ರೋಹಿಣಿ.ಎಸ್, ಶೋಭಾ.ಕೆ.ಹಿರೇಮಠ, ನಂದಕುಮಾರ.ಕೆ, ಸಂತೋಷ್.ಪಿ.ಎಚ್. ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕೆ.ಆರ್.ಸ್ವಾತಿ ಸ್ವಾಗತಿಸಿ, ಪ್ರಜಿತ್.ಪಿ.ರೈ ವಂದಿಸಿದರು. ವರದರಾಜ್. ಕೆ.ಆರ್ ಮತ್ತು ಆಕಾಶ್.ಎಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ವಿಜ್ಞಾನ, ಕನ್ನಡ, ಇಂಗ್ಲೀಷ್, ಹಿಂದಿ, ಸಂಸ್ಕೃತ, ಗಣಿತ, ಸಮಾಜ, ವೃತ್ತಿ ಪರಿಚಯ ಮತ್ತು ಕಲೆಗೆ ಸಂಬಂಧಿಸಿದ ವಿವಿಧ ಪ್ರಾಯೋಗಿಕ ಚಟುವಟಿಕೆಗಳು ಮತ್ತು ವಸ್ತು ಪ್ರದರ್ಶನದೊಂದಿಗೆ ಗಮನ ಸೆಳೆದರು. ವಿದ್ಯಾರ್ಥಿಗಳ ರಕ್ಷಕರು ಕಾರ್ಯಕ್ರಮಕ್ಕೆ ಆಗಮಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries