ಮುಳ್ಳೇರಿಯ: ಬೆಳ್ಳೂರು ಗ್ರಾ.ಪಂ.ನ 2017-18ನೇ ವರ್ಷದ ನವ ಕೇರಳ ಜನಪರ ಯೋಜನೆಯಲ್ಲಿ ಅಳವಡಿಸಲಾದ ವಿಶ್ವ ಬ್ಯಾಂಕ್ ನೆರವಿನ ಈಂದುಮೂಲೆಈಂದುಮೂಲೆ ಸಮುದಾಯ ಭವನದ ಲೋಕಾರ್ಪಣೆ ಗುರುವಾರ ಗ್ರಾ.ಪಂ. ಅಧ್ಯಕ್ಷೆಲತಾ ಎಂ. ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಜಿಲ್ಲಾ ಪಂಚಾಯತಿ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್ ಅವರು ಸಮುದಾಯ ಭವನವನ್ನು ಉದ್ಘಾಟಿಸಿ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭ ಅವರು ಮಾತನಾಡಿ ಪ.ಜಾತಿ-ವರ್ಗಗಳ ಸರ್ವತೋಮುಖ ಅಭಿವೃದ್ದಿಗಾಗಿ ಜಿಲ್ಲಾ ಪಂಚಾಯತು ವಿಶ್ವ ಬ್ಯಾಂಕ್ ನೆರವಿನೊಂದಿಗೆ ನಿರ್ಮಿಸಿದ ಸಮುದಾಯ ಭವನ ಸದುಪಯೋಗವಾಗುವಲ್ಲಿ ಸಹಕರಿಸಬೇಕಿದೆ ಎಂದು ತಿಳಿಸಿದರು. ಸರಕಾರಗಳ ನೆರವುಗಳು ಪೋಲಾಗದಂತೆ ಕಾಪಿಡುವ ಅಗತ್ಯ ಇದೆ. ಸಮರ್ಪಕ ಬಳಕೆಯು ಪ್ರಜ್ಞಾವಂತ ಸಮಾಜ ನಿರ್ಮಾನದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಮದು ಅವರು ಹೇಳಿದರು.

ಗ್ರಾ.ಪಂ. ಉಪಾಧ್ಯಕ್ಷಪುರುಷೋತ್ತಮನ್ ಸಿ.ವಿ, ಸ್ಥಾಯೀ ಸಮಿತಿ ಅಧ್ಯಕ್ಷರುಗಳಾದ ಮಾಲತಿ ಜೆ.ರೈ, ಮನೋಹರ ಎನ್.ಎ, ಗೀತಾ ಕೆ, ಕಾರಡ್ಕ ಬ್ಲಾಕ್ ಪಂಚಾಯತಿ ಸದಸ್ಯರಾದ ಸತ್ಯವತಿ ಸಿ.ರೈ, ಶ್ರೀಧರ ಎಂ, ಗ್ರಾ.ಪಂ.ಸದಸ್ಯರಾದ ಜಯಕುಮಾರ ಕೆ, ಸಕೀನ ಬಾನು, ಉಷಾ, ರಾಧಾ ವಿ, ಬಾಬು ಆನೆಕ್ಕಳ, ಸುಜಾತಾ ಎಂ.ರೈ, ರಾಧಾಕೃಷ್ಣ ಬಿ, ವಿ.ಎಸ್.ಸುಬ್ರಹ್ಮಣ್ಯ ಕಡಂಬಳಿತ್ತಾಯ, ಕಾರ್ಯದರ್ಶಿ ಗೀತಾ ಕುಮಾರಿ ಪಿ, ಕೇರಳ ಗ್ರಾಮೀಣ ಬ್ಯಾಂಕ್ ಪ್ರಬಂಧಕ ರಾಜಾರಾಮ ಕಾಮತ್ ಉಪಸ್ಥಿತರಿದ್ದು ಶುಭಹಾರೈಸಿದರು. ವಿಶಾಲಾಕ್ಷಿ ಜಿ.ಆರ್.ಸ್ವಾಗತಿಸಿ, ಚಂದ್ರಹಾಸ ರೈ ಮುಂಡಾಸ್ ವಂದಿಸಿದರು.