ಸರೋವರ ಕ್ಷೇತ್ರ ಅನಂತಪುರದಲ್ಲಿ ವಾರ್ಷಿಕ ಮಹೋತ್ಸವ
0
ಫೆಬ್ರವರಿ 21, 2019
ಕುಂಬಳೆ: ಅನಂತಪುರದ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ವಾರ್ಷಿಕ ಮಹೋತ್ಸವ ಫೆ.27 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಪೂರ್ವಾಹ್ನ 8 ರಿಂದ ಗಣಪತಿ ಹವನ, ಬಿಂಬ ಶುದ್ಧಿ, ನವಕಾಭಿಷೇಕ, 8.30 ಕ್ಕೆ ಸೋಪಾನ ಸಂಗೀತ(ಅಷ್ಟಪದಿ), 10 ಕ್ಕೆ ಹರಿಕಥಾ ಸತ್ಸಂಗ, 11 ರಿಂದ ತುಲಾಭಾರ ಸೇವೆ, ಮಧ್ಯಾಹ್ನ 12.30 ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 6.30 ರಿಂದ ದೀಪಾರಾಧನೆ, ಶಾಸ್ತಾರ ವನದಲ್ಲಿ ಭಜನೆ, 7 ರಿಂದ ನೃತ್ಯ ಕಾರ್ಯಕ್ರಮ, 8.30 ರಿಂದ ಮಲಯಾಳ ನಾಟಕ `ಜಟಾಯು' ಪ್ರದರ್ಶನ, ರಾತ್ರಿ 11 ರಿಂದ ಶ್ರೀ ಭೂತಬಲಿ, ಬೆಡಿ ಸೇವೆ, ರಾಜಾಂಗಣ ಪ್ರಸಾದ ವಿತರಣೆ ನಡೆಯಲಿದೆ.

