ಸ್ಮರಣ ಸಂಚಿಕೆಗೆ ಲೇಖನ ಆಹ್ವಾನ
0
ಫೆಬ್ರವರಿ 21, 2019
ಕುಂಬಳೆ: ಆರಿಕ್ಕಾಡಿಯ ಹನುಮಾನ್ ನಗರದ ಶ್ರೀ ಮಲ್ಲಿಕಾರ್ಜುನ ಮತ್ತು ಕೋಟೆ ಶ್ರೀ ವೀರಾಂಜನೇಯ ದೇವಸ್ಥಾನದ ಪುನರ್‍ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಎ.19 ರಿಂದ 24 ರ ವರೆಗೆ ನಡೆಯಲಿದ್ದು, ಇದರಂಗವಾಗಿ ಎ.19 ರಂದು ರಾಮಕ್ಷತ್ರಿಯ ಸಮಾಜದ ಅಖಿಲ ಭಾರತ ಮಟ್ಟದ ಸಮಾವೇಶ ನಡೆಯಲಿದೆ.
ಈ ಸಂದರ್ಭದಲ್ಲಿ ಬಿಡುಗಡೆಯಾಗಲಿರುವ ಸ್ಮರಣ ಸಂಚಿಕೆಯಲ್ಲಿ ಪ್ರಕಟನೆಗಾಗಿ ಕ್ಷತ್ರಿಯ ಸಮಾಜದ ಚಾರಿತ್ರಿಕ ಹಿನ್ನೆಲೆ, ಇತಿಹಾಸ, ಸಂಸ್ಕøತಿ, ಸಂಪ್ರದಾಯ, ಭಾಷೆ, ಐತಿಹಾಸಿಕ ದಾಖಲೆ ಪತ್ರಗಳು, ಕೋಟೆ ಕೊತ್ತಲಗಳು, ಆಡಳಿತ ನಡೆಸಿದ ವಿವರಗಳು, ಮೊಕ್ತೇಸರರ ಕುಟುಂಬದ ಹಿನ್ನೆಲೆ, ರಾಜಮನೆತನಗಳ ಆಡಳಿತ ನಡೆಸಿದ ವಿವರಗಳ ಮಾಹಿತಿಗಳ ಬಗ್ಗೆ ಪ್ರಕಟನೆಗೆ ಯೋಗ್ಯವಾದ ಸಂಕ್ಷಿಪ್ತ 5 ಪುಟಗಳಷ್ಟು ಬಿಳಿ ಕಾಗದದಲ್ಲಿ ಬರೆದ ಕಿರು ಬರಹವನ್ನು ಆಹ್ವಾನಿಸಲಾಗಿದೆ. ಲೇಖನವನ್ನು ಸ್ಪೀಡ್ ಪೆÇೀಸ್ಟ್ ಮೂಲಕ ಶಿವರಾಮ ಕಾಸರಗೋಡು, ಸಂಪಾದಕರು, ಸ್ಮರಣ ಸಂಚಿಕೆ ಸಮಿತಿ, ವೈದ್ಯನಾಥ ನಗರ, ಒಂದನೇ ಮುಖ್ಯ ರಸ್ತೆ, ಮಾಡೂರು, ಅಂಚೆ ಕೋಟೆಕಾರು, ಮಂಗಳೂರು-575022, ದ.ಕ.ಜಿಲ್ಲೆ, ಮೊಬೈಲ್:9448572016 ಈ ವಿಳಾಸಕ್ಕೆ ಕಳುಹಿಸಲು ಕೇಳಿಕೊಳ್ಳಲಾಗಿದೆ.

