ಇಂದು ಶುಚಿತ್ವ ಮಿಗವ್ ಜಿಲ್ಲಾ ಸಂಗಮ
0
ಫೆಬ್ರವರಿ 14, 2019
ಕಾಸರಗೋಡು: ಹರಿತ ಕೇರಳಂ ಮಿಷನ್ ನೇತೃತ್ವದಲ್ಲಿ "ಶುಚಿತ್ವ ಮಿಗವ್ (ಅತ್ಯುತ್ತಮ)ಜಿಲ್ಲಾ ಸಂಗಮ" ಕಾರ್ಯಕ್ರಮ ಇಂದು (ಫೆ.15) ಬೆಳಗ್ಗೆ 10 ಗಂಟೆಗೆ ನಡೆಯಲಿದೆ.
ತ್ಯಾಜ್ಯ ಪರಿಷ್ಕರಣೆ ವಲಯದಲ್ಲಿ ವಿವಿಧ ಸ್ಥಳೀಯಾಡಳಿತೆ ಸಂಸ್ಥೆಗಳು ನಡೆಸಿದ ಗಮನಾರ್ಹ ಚಟುವಟಿಕೆಗಳ ಕುರಿತು ಮಾಹಿತಿ ನೀಡುವ , ಈ ವಲಯದಲ್ಲಿ ಸ್ಥಳೀಯಾಡಳಿತೆ ಸಮಸ್ಥೆಗಳು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗುವುದು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯುವ ಸಮಾರಂಭವನ್ನು ಹರಿತ ಕೇರಳಂ ಮಿಷನ್ ಕಾರ್ಯಕಾರಿ ಉಪಾಧ್ಯಕ್ಷೆ ಡಾ.ಟಿ.ಎನ್.ಸೀಮಾ ಉದ್ಘಾಟಿಸುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಪ್ರಧಾನ ಭಾಷಣಮಾಡುವರು. ಜಿಲ್ಲೆಯಲ್ಲಿ ಹರಿತ ಕೇರಳಂ ಮಿಷನ್ ನಡೆಸಿದ ಮಹತ್ವದ ಚಟುವಟಿಕೆಗಳ ಕುರಿತು ಜಿಲ್ಲಾ ಸಮಿತಿ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್ ಮಾಹಿತಿ ನೀಡುವರು. ವಿವಿಧ ಸ್ಥಳೀಯಾಡಳಿತೆ ಸಂಸ್ಥೆಗಳ ಚಟುವಟಿಕೆಗಳ ವರದಿ ವಾಚಿಸಲಾಗುವುದು. ನಂತರ ಮುಂದಿನ ಚಟುವಟಿಕೆಗಳ ಕುರಿತು ಯೋಜನೆ ನಡೆಸಲಾಗುವುದು.

