ಕೊಂಡೆವೂರಿಗೆ ಪೇಜಾವರ ಶ್ರೀಗಳ ಭೇಟಿ
0
ಫೆಬ್ರವರಿ 17, 2019
ಉಪ್ಪಳ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮಕ್ಕೆ ಫೆ.18 ರಿಂದ 24ರ ವರೆಗೆ ನಡೆಯಲಿರುವ ಅತಿರಾತ್ರ ವಿಶ್ವಜಿತ್ ಸೋಮಯಾಗದ ಹಿನ್ನೆಲೆಯಲ್ಲಿ ಪರಮಪೂಜ್ಯ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ಶನಿವಾರ ಶ್ರೀ ಆಶ್ರಮಕ್ಕೆ ಭೇಟಿ ನೀಡಿ ಅತಿರಾತ್ರ ಸೋಮಯಾಗದ ಸಿದ್ಧತೆಗಳನ್ನು ಪರಿಶೀಲಿಸಿ ಸಂತಸ ವ್ಯಕ್ತಪಡಿಸಿ ಯಾಗದ ಯಶಸ್ಸಿಗೆ ಶುಭ ಹಾರೈಸಿದರು. ಕೊಂಡೆವೂರು ಶ್ರೀಆಶ್ರಮದ ಶ್ರೀಯೋಗಾನಂದ ಸರಸ್ವತೀ ಶ್ರೀಗಳ ಸಹಿತ ಪ್ರಮುಖರು ಉಪಸ್ಥಿತರಿದ್ದರು.

