ಇಂದು ಕೃಷಿ ಭವನಗಳಿಗೆ ರಜೆ ಇಲ್ಲ!- ತೆರೆದು ಕಾರ್ಯಾಚರಿಸಬೇಕು
0
ಫೆಬ್ರವರಿ 17, 2019
ಕಾಸರಗೋಡು: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿ.ಎಂ.ಕಿಸಾನ್) ಯೋಜನೆ ಪ್ರಕಾರ ಸೌಲಭ್ಯ ಪಡೆಯುವ ನಿಟ್ಟಿನಲ್ಲಿ ಕೃಷಿಕ ನೋಂದಣಿ ನಡೆಸುವ ಬಗ್ಗೆ ಎಲ್ಲ ಕೃಷಿಭವನಗಳಲ್ಲಿ ಅರ್ಜಿ ಇಂದಿ(ಫೆ.17)ನಿಂದ ಸ್ವೀಕರಿಸಲಾಗುವುದು. ಮೊದಲ ಕಂತು ಲಭಿಸುವ ನಿಟ್ಟಿನಲ್ಲಿ ಫೆ.20ರ ಮುಂಚಿತವಾಗಿ ಕೃಷಿಭವನಗಳಲ್ಲಿನೋಂದಣಿನಡೆಸಬೇಕು. ಈ ಹಿನ್ನೆಲೆಯಲ್ಲಿ ಎಲ್ಲ ಕೃಷಿಭವನ ಕಚೇರಿಗಳು ಇಂದು (ಫೆ.17) ರಂದು ತೆರೆದು ಕಾರ್ಯಾಚರಿಸಬೇಕು ಎಂದು ಕಾಸರಗೋಡು ಪ್ರಧಾನ ಕೃಷಿ ಅಧಿಕಾರಿ ತಿಳಿಸಿದರು. ಬ್ಯಾಂಕ್ ಪಾಸ್ ಪುಸ್ತಕದ ನಕಲು, ಆಧಾರ್ ಕಾರ್ಡ್ ನಕಲು, 2018-19ರ ತೆರಿಗೆ ರಶೀದಿ ನಕಲು, ಪಡಿತರಚೀಟಿ ನಕಲು ಇತ್ಯಾದಿ ಸಹಿತ ಅರ್ಜಿಯೊಂದಿಗೆ ಸಲ್ಲಿಸಬೇಕು.

