ಇಂದು ಮೇಲ್ಪರಂಬ ಪೊಲೀಸ್ ಠಾಣೆ ಉದ್ಘಾಟನೆ
0
ಫೆಬ್ರವರಿ 17, 2019
ಕಾಸರಗೋಡು: ಚಟ್ಟಂಚಾಲ್ ನಲ್ಲಿ ನೂತನವಾಗಿ ನಿರ್ಮಾಣಗೊಂಡ ಮೇಲ್ಪರಂಬ ಪೊಲೀಸ್ ಠಾಣೆಯ ಉದ್ಘಾಟನೆ ಇಂದು(ಫೆ.17) ನಡೆಯಲಿದೆ.
ಮಧ್ಯಾಹ್ನ 3 ಗಂಟೆಗೆ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವೀಡಿಯೋ ಕಾನ್ಸ್ ಫೆರೆನ್ಸ್ ಮೂಲಕ ಠಾಣೆಯನ್ನು ಉದ್ಘಾಟಿಸುವರು. ಶಾಸಕ ಕೆ.ಕುಂಞÂರಾಮನ್ ಅಧ್ಯತೆ ವಹಿಸುವರು. ಸಂಸದ ಪಿ.ಕರುಣಾಕರನ್ ಮುಖ್ಯ ಅತಿಥಿಯಾಗಿರುವರು.

