ಲೋಕಸಭೆ ಕ್ಷೇತ್ರದಲ್ಲಿ ಅಭಿವೃದ್ಧಿಗೆ 27.15ಕೋಟಿ ರೂ. ಮಂಜೂರು
0
ಫೆಬ್ರವರಿ 17, 2019
ರಾಜ್ಯದ ಮುಂಚೂಣಿಯಲ್ಲಿರುವ ಅತ್ಯುತ್ತಮ ಎರಡು ಜಿಲ್ಲೆಗಳಲ್ಲಿ ಕಾಸರಗೋಡೂ ಒಂದು
ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ27.15 ಕೊಟಿರೂ.ನ ಯೋಜನೆಗಳಿಗೆ ಆಡಳಿತಾನುಮತಿ ಲಭಿಸಿದೆ. ಈ ಮೂಲಕ ಇಡೀ ರಾಜ್ಯದಲ್ಲಿ ಅತ್ಯಧಿಕ ಮುಂಚೂಣಿಯಲ್ಲಿರುವ ಎರಡು ಮಂಡಲಗಳಲ್ಲಿ ಕಾಸರಗೋಡು ಕ್ಷೇತ್ರ ಸೇರಿದೆ.
ಜಿಲ್ಲಾ ಯೋಜನೆ ಸಮಿತಿ ಸಭಾಂಗಣದಲ್ಲಿ ಶನಿವಾರ ನಡೆದ ಸಂಸದ ಪಿ.ಕರುಣಾಕರನ್ ಅವರ ಸ್ಥಳೀಯ ಅಭಿವೃದ್ಧಿ ನಿಧಿ ಅವಲೋಕನಸಭೆಯಲ್ಲಿ ಈ ವಿಚಾರವನ್ನು ಸಂಸದ ಪ್ರಸ್ತಾಪಿಸಿದರು.
ಸಂಸದರು ನಿರ್ದೇಶಿಸಿದ 497 ಯೋಜನೆಗಳಲ್ಲಿ 415 ಚಟುವಟಿಕೆಗಳಿಗೆ ಈಗಾಗಲೇ ಮಂಜೂರಾತಿ ಲಭಿಸಿದೆ. 295 ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. 120 ಚಟುವಟಿಕೆಗಳ ನಿರ್ವಹಣೆ ನಡೆದು ಬರುತ್ತಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು. ಇದರಲ್ಲಿ 4.45 ಕೋಟಿ ರೂ.ನ ಯೋಜನೆಗಳು ಪರಿಶಿಷ್ಟ ಜಾತಿ-ಪಂಗಡ ವಲಯಗಳಿಗಾಗಿ ಮಂಜೂರಾಗಿದೆ. ಈ ವರೆಗೆ 2077 ಕೋಟಿ ರೂ. ವೆಚ್ಚಮಾಡಲಾಗಿದೆ.
ಜಿಲ್ಲೆಯಲ್ಲಿ ಸುಮಾರು 95 ರಸ್ತೆಗಳು, ತತ್ಸಂಬಧಿ ಚಟುವಟಿಕೆಗಳು, ಶಾಲೆಗಳಲ್ಲಿ ಗ್ರಂಥಾಲಯಗಳಿಗಾಗಿ ಸುಮಾರು 36 ಕಟ್ಟಡ ನಿರ್ಮಾಣ ಚಟುವಟಿಕೆಗಳು, 27 ಶಾಲಾ ವಾಹನಗಳು, 88 ಶಾಲೆಗಳಿಗಳಿಗೆ ಕಂಪ್ಯೂಟರ್ ಸಂಬಂಧಿ ಉಪಕರಣಗಳು, ಪರಿಶಿಷ್ಟ ಜಾತಿ-ಪಂಗಡ ವಲಯಗಳಲ್ಲಿ ರಸ್ತೆಗಳು, ಕುಡಿಯುವ ನೀರು, ಸಹಿತ 50 ಯೋಜನೆಗಳಿಗೆ, ವಿಶೇಷಚೇತನರ7 ಚಟುವಟಿಕೆಗಳಿಗೆ, 3 ಹೈಮಾಸ್ಟ್ ಲೈಟ್ ಗಳು, ಬಸ್ ತಂಗುದಾಣ ಇತ್ಯಾದಿಗಳಿಗೆ ಆಡಳಿತಾನುಮತಿ ಲಭಿಸಿದೆ. ಮಂಜೂರಾತಿಗೆ ಅರ್ಹವಾದ ಸಂಸದರ ಶಿಫಾರಸಿನ ಎಲ್ಲ ಯೋಜನೆಗಳಿಗೆ ಮಂಜೂರಾತಿ ಲಭಿಸಿರುವುದಾಗಿ ಸಹಾಯಕ ಜಿಲ್ಲಾ ಯೋಜನೆ ಅಧಿಕಾರಿ ನಿನೋಜ್ ಮೇಪಿಡಿಯತ್ ಸಭೆಯಲ್ಲಿ ತಿಳಿಸಿದರು.
ಕಾಸರಗೋಡು ಲೋಕಸಭೆ ಕ್ಷೇತ್ರದಲ್ಲಿ ನಿರ್ವಹಣೆ ನಡೆದುಬರುತ್ತಿರುವ ಯೋಜನೆಗಳಿಗೆ 5 ಕೋಟಿ ರೂ. ಕೇಂದ್ರ ಸರಕಾರದಿಂದ ತುರ್ತಾಗಿ ಲಭಿಸುವಂತೆ ಒತ್ತಯಾಯಿಸಿರುವುದಾಗಿ ಸಂಸದ ಪಿ.ಕರುಣಾಕರನ್ ಸಭೆಯಲ್ಲಿ ತಿಳಿಸಿದರು. ಈ ಸಂಬಂಧ ಚಟುವಟಿಕೆಗಳನ್ನು ಪೂರ್ತಿಗೊಳಿಸಿ ಬಿಲ್ ಸಲ್ಲಿಸುವಂತೆ , ಪರಿಶಷ್ಟ ಜಾತಿ-ಪಂಗಡದಲ್ಲಿ ಸಂಸದರು ನಿರ್ದೇಶಿಸಿದ ಯೋಜನೆಗಳ ಎಸ್ಟಿಮೇಟ್ ಮುಂಗಡವಾಗಿ ಸಿದ್ಧಪಡಿಸಿ ನೀಡುವಂತೆ, ಕುಡಿಯುವನೀರಿನ ಯೋಜನೆಗಳಿಗೆ ಆದ್ಯತೆ ನೀಡುವಂತೆ ಅವರು ತಿಳಿಸಿದರು.
ಸಂಸದರ ನಿಧಿಯನ್ನು ಅತ್ಯುತ್ತಮ ರೀತಿ ಬಳಸಿದ ಬಗ್ಗೆ ಸಂಸದ ಶ್ಲಾಘನೆ ವ್ಯಕ್ತಪಡಿಸಿದರು. ಕಳೆದ 5 ವರ್ಷ ಅವಧಿಯಲ್ಲಿ ಲಭಿಸಿದ ಬೆಂಬಲಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು. ಜಿಲ್ಲಾ ಹಣಕಾಸು ಅಧಿಕಾರಿ ಸತೀಶನ್ ಕೆ., ವಿವಿಧ ನಿರ್ವಹಣಾ ಅಧಿಕಾರಿಗಳು ಉಪಸ್ಥಿತರಿದ್ದರು.

