HEALTH TIPS

ಉಗ್ರರ ದಾಳಿ ವಿಫಲಗೊಳಿಸಿದ್ದ 16ರ ಬಾಲಕನಿಗೆ ಶೌರ್ಯ ಚಕ್ರ ಪುರಸ್ಕಾರ

ನವದೆಹಲಿ: ಉಗ್ರರ ವಿರುದ್ಧ ಹೋರಾಡುವ ವೀರಯೋಧರಿಗೆ ಶೌರ್ಯ ಚಕ್ರ, ಪರಮವೀರ ಚಕ್ರ ಪ್ರಶಸ್ತಿ ಲಭಿಸುವುದನ್ನು ಕೇಳಿದ್ದೀರಿ. ಆದರೆ ಈ ಬಾರಿ ವಿಶೇಷವೆಂಬಮ್ತೆ ಉಗ್ರರ ದಾಳಿಯನ್ನು ಎದುರಿಸಿದ 16ರ ಬಾಲಕನೊಬ್ಬನಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶೌರ್ಯ ಚಕ್ರ ಪುರಸ್ಕಾರ ದೊರಕಿದೆ. 2017ರ ಅಕ್ಟೋಬರ್? 16ರ ಮಧ್ಯರಾತ್ರಿ ಕಾಶ್ಮೀರದ ಶೋಪಿಯಾನ್? ಜಿಲ್ಲೆಯ ನಿವಾಸಿ ಪಿಡಿಪಿ ಕಾರ್ಯಕರ್ತ, ನಾಯಕರಾಗಿದ್ದ ಮಾಜಿ ಸರ್ ಪಂಚ್ ಮೊಹಮ್ಮದ್ ರಂಜಾನ್ ಎನ್ನುವವರ ಮನೆಗೆ ನುಗ್ಗಿ ಅವರ ಹತ್ಯೆಗೆ ಉಗ್ರರು ಯತ್ನಿಸಿದ್ದರು. ಆ ವೇಳೆ ರಂಜಾನ್ಪುತ್ರ ದ ಇರ್ಫಾನ್ ರಂಜಾನ್ ಶೇಖ್ ಉಗ್ರರನ್ನು ಎದುರಿಸಿ ಅವರನ್ನು ಬಾಗಿಲಿನಿಂದ ಒಳಪ್ರವೇಶಿಸದಂತೆ ತಡೆಹಿಡಿದಿದ್ದನು. ಶಸ್ತ್ರಸಜ್ಜಿತರಾಗಿದ್ದ ಉಗ್ರರು ಗುಂಡು ಹಾರಿಸಿದರೂ ಎದೆಗುಂದದೆ ತನ್ನ ತಂದೆಯ ಪ್ರಾಣ ರಕ್ಷಣೆಗೆ ನಿಂತಿದ್ದ ಆ ಬಾಲಕನಿಗೆ ರಾಷ್ಟ್ರಪತಿ ಕೋವಿಂದ್ ಶೌರ್ಯ ಚಕ್ರ ನೀಡಿ ಸನ್ಮಾನಿಸಿದ್ದಾರೆ. ಘಟನೆಯ ವೇಳೆ ಮೊಹಮ್ಮದ್ ರಂಜಾನ್ ತೀವ್ರವಾಗಿಗಾಯಗೊಂಡಿದ್ದು ಬಳಿಕ ನಿಧನರಾಗಿದ್ದರು. ಅದೇ ವೇಳೆ ಓರ್ವ ಉಗ್ರನಿಗೆ ಸಹ ಗುಂಡೇಟಿನಿಂದ ಗಂಭೀರ ಗಾಯವಾಗಿತ್ತು. ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿರುವ ಇರ್ಫಾನ್ ಮುಂದೆ ಐಪಿಎಸ್ ಅಧಿಕಾರಿಯಾಗುವ ಇಚ್ಚೆ ವ್ಯಕ್ತಪಡಿಸಿದ್ದಾನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries