ಮಾ.23 : ಗೋವಿಂದ ಪೈ ಜನ್ಮದಿನೋತ್ಸವ
0
ಮಾರ್ಚ್ 21, 2019
ಮಂಜೇಶ್ವರ: ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಹೊಸಬೆಟ್ಟು ಮಂಜೇಶ್ವರ ಇದರ ಆಶ್ರಯದಲ್ಲಿ ಕನ್ನಡದ ಪ್ರಥಮ ರಾಷ್ಟ್ರ ಕವಿ ಮಂಜೇಶ್ವರ ಗೋವಿಂದ ಪೈ ಅವರ 137 ನೇ ಜನ್ಮದಿನೋತ್ಸವ ಗಿಳಿವಿಂಡು ಆವರಣದ ಪಾರ್ತಿಸುಬ್ಬ ವೇದಿಕೆಯಲ್ಲಿ ಮಾ.23 ರಂದು ಶನಿವಾರ ನಡೆಯಲಿದೆ.
ಪೂರ್ವಾಹ್ನ 10 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಗೋವಿಂದ ಪೈಯವರ ವ್ಯಕ್ತಿತ್ವ ಮತ್ತು ಮನೋಧರ್ಮ ಬಗ್ಗೆ ಹಂಪಿ ಕನ್ನಡ ವಿ.ವಿ. ಡೀನ್, ವಿಶ್ರಾಂತ ಪ್ರಾಧ್ಯಾಪಕ ಪೆÇ್ರ.ಎ.ವಿ.ನಾವಡ, ಗೋವಿಂದ ಪೈಯವರ ಒಂದು ಕವಿತೆಯ ಆಸ್ವಾದನೆ ಬಗ್ಗೆ ಲೇಖಕ, ವಿಮರ್ಶಕ ಟಿ.ಎ.ಎನ್.ಖಂಡಿಗೆ ಉಪನ್ಯಾಸ ನೀಡಲಿದ್ದಾರೆ.
ಗಾನ ಮಂಜೂಷ ಕಾಸರಗೋಡು ಅವರಿಂದ ಕಾವ್ಯ-ಗಾನ-ಯಾನ ಮತ್ತು ವಿವಿಧ ಕವಿಗಳಿಂದ ಸ್ವರಚಿತ ಕವನ ವಾಚನ ನಡೆಯಲಿದೆ. ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಟ್ರಸ್ಟಿ ಸುಭಾಶ್ಚಂದ್ರ ಕಣ್ವತೀರ್ಥ ಪ್ರಾಸ್ತಾವಿಕ ಮಾತನಾಡಲಿದ್ದಾರೆ. ವೈದ್ಯ, ಸಾಹಿತಿ ಡಾ.ರಮಾನಂದ ಬನಾರಿ ಕಾರ್ಯಕ್ರಮ ನಿರ್ವಹಿಸುವರು.

