ಮಾ.23 : ಕನ್ನಡ ಹೋರಾಟ ಸಮಿತಿ ಸಭೆ
0
ಮಾರ್ಚ್ 20, 2019
ಕಾಸರಗೋಡು: ಕನ್ನಡ ಹೋರಾಟ ಸಮಿತಿಯ ಸಭೆ ಮಾ.23 ರಂದು ಮಧ್ಯಾಹ್ನ 2.30 ಕ್ಕೆ ಬೀರಂತಬೈಲು ಕನ್ನಡ ಅಧ್ಯಾಪಕ ಭವನದಲ್ಲಿ ಜರಗಲಿದೆ.
ಪ್ರಸ್ತುತ ಕನ್ನಡ ಹೋರಾಟ ಹಾಗು ಇತರ ಜ್ವಲಂತ ಸಮಸ್ಯೆಗಳ ಬಗ್ಗೆ ಅವಲೋಕನ ನಡೆಸಿ ಕ್ರಮ ಕೈಗೊಳ್ಳುವ ಕುರಿತು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಕನ್ನಡ ಭಾಷಾಭಿಮಾನಿಗಳು, ಕನ್ನಡಪರ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಕನ್ನಡ ಅಧ್ಯಾಪಕರ ಸಂಘದ ಪ್ರತಿನಿಧಿಗಳು, ಅಂಗನವಾಡಿ ಕನ್ನಡ ಅಧ್ಯಾಪಕಿಯರು, ಕನ್ನಡ ಜನಪ್ರತಿನಿ„ಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಹೋರಾಟ ಸಮಿತಿಯ ಪದಾಧಿಕಾರಿಗಳು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

