ಇಂದು ಧೂಮಾವತೀ ದೈವದ ಕೋಲ
0
ಮಾರ್ಚ್ 20, 2019
ಕಾಸರಗೋಡು: ಕೂಡ್ಲು ಮನ್ನಿಪಾಡಿ ಆಲಂಗೋಡು ಶ್ರೀ ಧೂಮಾವತೀ ದೈವಸ್ಥಾನದಲ್ಲಿ ಮಾ.21 ರಂದು ಶ್ರೀ ಧೂಮಾವತೀ ದೈವದ ಕೋಲ ಜರಗಲಿದೆ.
ಬೆಳಿಗ್ಗೆ 7 ಕ್ಕೆ ಗಣಪತಿ ಹೋಮ, 7.30 ರಿಂದ ಭಜನೆ, 10 ರಿಂದ ಶ್ರೀ ಧೂಮಾವತೀ ದೈವದ ಕೋಲ, ಮಧ್ಯಾಹ್ನ 12.30 ಕ್ಕೆ ಶ್ರೀ ಧೂಮಾವತೀ, ರಕ್ತೇಶ್ವರಿ ಹಾಗು ಗುಳಿಗ ದೈವಗಳಿಗೆ ತಂಬಿಲ ಸೇವೆ, ಮಧ್ಯಾಹ್ನ 1 ರಿಂದ ಅನ್ನಸಂತರ್ಪಣೆ ನಡೆಯಲಿದೆ.
ಮಾ.20 ರಂದು ಸಂಜೆ ವಿಷ್ಣುಮಂಗಲ ಶ್ರೀ ಧೂಮಾವತೀ ದೈವಸ್ಥಾನದಿಂದ ಆಲಂಗೋಡು ಶ್ರೀ ಧೂಮಾವತೀ ದೈವಸ್ಥಾನಕ್ಕೆ ಭಂಡಾರ ಮೆರವಣಿಗೆ, ಗಣೇಶ ನಗರದ ಶ್ರೀ ದುರ್ಗಾಪರಮೇಶ್ವರಿ ದೇವಾಲಯದಿಂದ ಶೋಭಾಯಾತ್ರೆಯೊಂದಿಗೆ ಬೆಳ್ಳಿಯ ಪ್ರಭಾವಳಿ ಸಮರ್ಪಿಸಲಾಯಿತು. ಆ ಬಳಿಕ ಗುಳಿಗನ ಕೋಲ, ಅನ್ನಸಂತರ್ಪಣೆ ಜರಗಿತು.

