ಎಂಡೋಸಲ್ಪಾನ್ ಸಂತ್ರಸ್ತರಿಗೆ ಕೇರಳ ಸರಕಾರ ವಂಚನೆ : ಶಾಸಕ ಎನ್.ಎ.ನೆಲ್ಲಿಕುನ್ನು
0
ಮಾರ್ಚ್ 20, 2019
ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತರ ತಾಯಂದಿರು ಹಾಗೂ ಮಕ್ಕಳನ್ನು ಪಿಣರಾಯಿ ವಿಜಯನ್ ನೇತೃತ್ವದ ರಾಜ್ಯದ ಎಡರಂಗ ಸರಕಾರವು ಸಂಪೂರ್ಣವಾಗಿ ವಂಚಿಸಿದೆ ಎಂದು ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಆರೋಪಿಸಿದ್ದಾರೆ.
ಜನವರಿ 30ರಿಂದ ಫೆಬ್ರವರಿ 3ರ ವರೆಗೆ ಎಂಡೋ ಪೀಡಿತರ ತಾಯಂದಿರು ಹಾಗೂ ಮಕ್ಕಳು ನಡೆಸಿದ ಅನಿರ್ದಿಷ್ಟಾವ„ ಮುಷ್ಕರ ವೇಳೆ ಮುಖ್ಯಮಂತ್ರಿ ಹಾಗೂ ಸಚಿವರು ಕೈಗೊಂಡ ಕ್ರಮ ಅತ್ಯಂತ ವಂಚನೆಯದ್ದಾಗಿದೆ. ತಿರುವನಂತಪುರ ಸೆಕ್ರೆಟರಿಯೇಟ್ ಮುಂದೆ ನಡೆದ ಚಳವಳಿಯನ್ನು ಕೊನೆಗೊಳಿಸಲು ಅವರು ಕುತಂತ್ರ ಮಾಡಿದ್ದರು ಎಂದು ಶಾಸಕರು ನೆನಪಿಸಿದರು.
ಕೇರಳ ಸರಕಾರದ ಕ್ರಮ ಪ್ರಾಮಾಣಿಕತೆಯಿಂದ ಕೂಡಿರಲಿಲ್ಲ. ಪ್ರಾಮಾಣಿಕವಾಗಿದ್ದರೆ ಮುಖ್ಯಮಂತ್ರಿಯೊಂದಿಗೆ ನಡೆದ ಚರ್ಚೆ ವೇಳೆ ನೀಡಿದ ಪ್ರಧಾನ ಬೇಡಿಕೆಗಳು ಬುಡಮೇಲುಗೊಳ್ಳುತ್ತಿರಲಿಲ್ಲ. 2017ರ ವೈದ್ಯಕೀಯ ಶಿಬಿರದಲ್ಲಿ ಪಾಲ್ಗೊಂಡ 1905 ಮಂದಿಯ ಪೈಕಿ 18 ವರ್ಷಕ್ಕಿಂತ ಕೆಳಗಿನ ಮಕ್ಕಳನ್ನು ಇನ್ನೊಮ್ಮೆ ತಪಾಸಣೆಗೊಳಪಡಿಸದೆ ಸಂತ್ರಸ್ತರ ಪಟ್ಟಿಯಲ್ಲಿ ಸೇರಿಸಲು ನಿರ್ಧರಿಸಲಾಗಿತ್ತೆಂದೂ ಕಾಸರಗೋಡು ಎಂಎಲ್‍ಎ ತಿಳಿಸಿದ್ದಾರೆ.
ಎಂಡೋಸಲ್ಫಾನ್ ಸಂತ್ರಸ್ತರನ್ನು ಪತ್ತೆಹಚ್ಚುವಾಗ ಗಡಿ ಪ್ರದೇಶಗಳನ್ನು ಪರಿಗಣಿಸುವುದಿಲ್ಲ ಎಂದು ನಿರ್ಧರಿಸಲಾಗಿತ್ತು. ಆದರೆ ಈ ನಿರ್ಧಾರವು ಮಾ.2ರಂದು ಸರಕಾರ ಹೊರಡಿಸಿದ ಆದೇಶಕ್ಕೆ ವಿರುದ್ಧವಾಗಿದ್ದು, ಇದು ಮುಖ್ಯಮಂತ್ರಿಗೆ ತಿಳಿದಿರುವ ವಿಚಾರವಾಗಿದೆ. 18 ವರ್ಷ ಪ್ರಾಯಕ್ಕಿಂತ ಕೆಳಗಿನ ಮಕ್ಕಳನ್ನು ವೈದ್ಯಕೀಯ ತಂಡದ ತಪಾಸಣೆಯ ಆಧಾರದಲ್ಲಿ ಸೌಲಭ್ಯಗಳಿಗಾಗಿ ಒಳಪಡಿಸಬೇಕಾಗಿದೆ. ಎಂಡೋಸಲಾನ್ ದುಷ್ಪರಿಣಾಮ ಬೀರಿದ ಪಂಚಾಯತ್‍ಗಳಿಂದ ಹೊರಗೆ ಹೋಗಿ ವಾಸಿಸುವವರನ್ನು ಕೂಡ ಪರಿಗಣಿಸಿ ಮಾನದಂಡ ಪ್ರಕಾರ ತಪಾಸಣೆ ನಡೆಸಿ ಸಂತ್ರಸ್ತರ ಪಟ್ಟಿಯಲ್ಲಿ ಒಳಪಡಿಸಲು ಕ್ರಮ ಕೈಗೊಳ್ಳಬೇಕಾಗಿದೆ ಎಂಬುದನ್ನು ಆದೇಶದಲ್ಲಿ ತಿಳಿಸಲಾಗಿದೆ.
ಕಾಸರಗೋಡು ಜಿಲ್ಲೆಯ 11 ಗ್ರಾಮ ಪಂಚಾಯತ್‍ಗಳು ಇದೀಗ ಎಂಡೋಸಲಾನ್ ಸಂತ್ರಸ್ತರ ಪಟ್ಟಿಯಲ್ಲಿವೆ. ಈ ಪಂಚಾಯತ್‍ಗಳ ಎಂಡೋಸಲಾನ್ ಸಂತ್ರಸ್ತರಿಗಿಂತಲೂ ಹೆಚ್ಚು ಸಂಕಷ್ಟ ಎದುರಿಸುತ್ತಿರುವ ಇತರ ಪಂಚಾಯತ್‍ಗಳ ಬಡವರ ಕುರಿತು ಚಿಂತಿಸಲು ಹಾಗೂ ಮನುಷ್ಯತ್ವ ತೋರಿಸಲು ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಇದರ ವಿರುದ್ಧ ಜನರು ಒಗ್ಗಟ್ಟಾಗಿ ನಿಲ್ಲಬೇಕೆಂದು ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಹೇಳಿಕೆ ನೀಡಿದ್ದಾರೆ.

