ಬೆಳ್ಳೂರು:23ರಂದು ಹೊನಲು ಬೆಳಕಿನ ಕಬಡ್ಡಿ, ಹಗ್ಗ ಜಗ್ಗಾಟ ಪಂದ್ಯ
0
ಮಾರ್ಚ್ 20, 2019
ಮುಳ್ಳೇರಿಯ: ಬೆಳ್ಳೂರು ಶಿವಾಜಿ ಫ್ರೆಂಡ್ಸ್ ನೇತೃತ್ವದಲ್ಲಿ ಬೆಳ್ಳೂರು ಅಟಲ್ಜಿ ನಗರದಲ್ಲಿ ಮಾ.23ರಂದು ರಾತ್ರಿ 62ಕೆ.ಜಿ. ವಿಭಾಗದ ಹೊನಲು ಬೆಳಕಿನ ಕಬಡ್ಡಿ, ಹಗ್ಗ ಜಗ್ಗಾಟ ಸ್ಪರ್ಧೆ ನಡೆಯಲಿದೆ.
ರಾತ್ರಿ 8ಕ್ಕೆ ಆರಂಭವಾಗುವ ಸಭಾ ಕಾರ್ಯಕ್ರಮವನ್ನು ಬೆಳ್ಳೂರು ಗ್ರಾ.ಪಂ.ಅಧ್ಯಕ್ಷೆ ಲತಾ ಯುವರಾಜ್ ಉದ್ಘಾಟಿಸುವರು.ಬೆಳ್ಳೂರು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ವಿ.ಎಸ್.ಸುಬ್ರಹ್ಮಣ್ಯ ಕಡಂಬಳಿತ್ತಾಯ ಅಧ್ಯಕ್ಷತೆ ವಹಿಸಲಿದ್ದಾರೆ.
ಕರ್ನಾಟಕ ಭಜರಂಗದಳ ಪ್ರಾಂತ್ಯ ಸಂಚಾಲಕ ಮುರಳಿಕೃಷ್ಣ ಹಸಂತಡ್ಕ, ಉಡುಪಿ ನೋಟರಿ ನ್ಯಾಯವಾದಿ ಸಂಕಪ್ಪ ಎ., ಜೆ.ಎಸ್.ಪುತ್ತೂರು ವೇಣುಗೋಪಾಲ್ ತತ್ವಮಸಿ, ಬೆಳ್ಳೂರು ಪಂಚಾಯಿತಿ ಉಪಾಧ್ಯಕ್ಷ ಪುರುಷೋತ್ತಮನ್ ಸಿ.ವಿ., ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆ ಮಾಲತಿ ಜೆ.ರೈ, ಕ್ಷೇಮಕಾರ್ಯ ಸಮಿತಿ ಅಧ್ಯಕ್ಷ ಮನೋಹರ್ ಎನ್.ಎ., ಆರೋಗ್ಯ ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷೆ ಗೀತಾ ಕೆ., ವಾರ್ಡ್ ಸದಸ್ಯೆ ರಾಧಾ ವಿ., ಆರ್.ಎಸ್.ಎಸ್. ಬೆಳ್ಳೂರು ಕಾರ್ಯವಾಹಕ್ ಪ್ರದೀಪ್ ಶೆಟ್ಟಿ ನೆಲ್ಲಿಪ್ಪುಣಿ, ಬೇಳ್ಳೂರು ಅಯ್ಯಪ್ಪ ಭಜನಾ ಮಂದಿರ ಅಧ್ಯಕ್ಷ ಜಿ.ವಿಠಲ್ ಶೆಟ್ಟಿ, ಓಂಕಾರ್ ಯುವಕ ಸಂಘ ಅಧ್ಯಕ್ಷ ರೋಹಿತ್ ಕುಮಾರ್ ಬಾನಗದ್ದೆ.ರವಿ ಕೊಯಂಗೋಡು, ಪ್ರಾಯೋಜಕ ಸಮಿತಿ ಅಧ್ಯಕ್ಷ ಪ್ರದೀಪ್ ಕುಮಾರ್, ರಮೇಶ್ ಆಚಾರ್ಯ ನಾಟೆಕಲ್ಲು ಉಪಸ್ಥಿತರಿರುವರು.
ಸಮಾರೋಪ ಸಮಾರಂಭದಲ್ಲಿ ಕಾರಡ್ಕ ಬ್ಲಾಕ್ ಪಂಚಾಯಿತಿ ಸದಸ್ಯ ಶ್ರೀಧರ ಎಂ.ಅಧ್ಯಕ್ಷತೆ ವಹಿಸಲಿದ್ದಾರೆ.ಬೆಳ್ಳೂರು ಮಹಾವಿಷ್ಣು ದೇವಳ ಅಧ್ಯಕ್ಷ ಎ.ಬಿ.ಗಂಗಾಧರ ಬಲ್ಲಾಳ್ ಬಹುಮಾನ ವಿತರಿಸುವರು.ದೇವಳದ ಕಾರ್ಯದರ್ಶಿ ಡಾ.ಮೋಹನ್ ದಾಸ್ ರೈ, ಗ್ರಾ.ಪಂ. ಸದಸ್ಯ ಜಯಕುಮಾರ್ ಕೆ. ಬಿಜೆಪಿ ಪಂಚಾಯಿತಿ ಸಮಿತಿ ಕಾರ್ಯದರ್ಶಿ ಜಯಾನಂದ ಕುಳ ಉಪಸ್ಥಿತರಿರುವರು.

